ಇತ್ತೀಚಿನ ಸುದ್ದಿ
ವೀಕೆಂಡ್ ಕರ್ಫ್ಯೂ : ಮಧ್ಯಾಹ್ನ 2ರ ತನಕ ದಿನಸಿ, ಹಣ್ಣು-ತರಕಾರಿ, ಮೀನು- ಮಾಂಸ ಖರೀದಿಗೆ ಇದೆ ಅವಕಾಶ
02/07/2021, 07:48
ಮಂಗಳೂರು(reporterkarnataka news): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಲಾಕ್ ಡೌನನ್ನು ಇನ್ನಷ್ಟು ಸಡಿಲಿಸಲಾಗಿದೆ. ಬೆಳಗ್ಗೆ 7ರಿಂದ ಸಂಜೆ 5ರ ತನಕ ಅನ್ ಲಾಕ್ ಮಾಡಲಾಗಿದೆ. ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5ರ ವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮಧ್ಯಾಹ್ನ 2ರ ತನಕ ಅವಕಾಶ ನೀಡಲಾಗಿದೆ.
ಜಿಲ್ಲೆಯಲ್ಲಿ ವೀಕೆಂಡ್ ದಿನಗಳನ್ನು ಬಿಟ್ಟು ಉಳಿದ ದಿನಗಳಲ್ಲಿ ಸಂಜೆ 5ರ ವರೆಗೆ ಅಂಗಡಿ -ಮುಂಗಟ್ಟು ತೆರೆಯಲು ಹಾಗೂ ಸಿಟಿ, ಸರ್ವಿಸ್ ಬಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವೀಕೆಂಡ್ ಕರ್ಫ್ಯೂ ಶುಕ್ರವಾರ(ಇಂದು) ಸಂಜೆ 7ರಿಂದ ಸೋಮವಾರ ಬೆಳಗ್ಗೆ 5ರ ವರಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಆದರೆ, ಮಧ್ಯಾಹ್ನ 2ರ ವರೆಗೆ ಹಾಲು, ಮೆಡಿಕಲ್, ದಿನಸಿ, ತರಕಾರಿ, ಹಣ್ಣು ಹಂಪಲು, ಮೀನು – ಮಾಂಸದ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ.