ಇತ್ತೀಚಿನ ಸುದ್ದಿ
ಸ್ವ ಕ್ಷೇತ್ರದ ಕಾರ್ಯಕ್ರಮ: ಶಾಸಕ ಕುಮಠಳ್ಳಿ ಗೈರು; ಮಾಜಿ ಡಿಸಿಎಂ ಸವದಿ ಹಾಜರು
14/11/2022, 21:32
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ಮತಕ್ಷೇತ್ರದಲ್ಲಿ ಏನೇ ಸರ್ಕಾರಿ ಕೆಲಸಗಳು, ಗುದ್ದಲಿ ಪೂಜೆ, ಸಭೆ ನಡೆದಾಗ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅಂತೂ ಇದ್ದೇ ಇರತ್ತಾರೆ. ಆದರೆ ಕ್ಷೇತ್ರದ ಪ್ರತಿನಿಧಿಯಾದ ಶಾಸಕ ಮಹೇಶ ಕುಮಠಳ್ಳಿ ಅವರು ಅವರದೇ ಪಕ್ಷದ ಸಚಿವರುಗಳು ಬಂದರೂ ಅಂತರ ಕಾಯ್ದುಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ.

ಕೆಲ ತಿಂಗಳಗಳ ಹಿಂದೆ 9 ಕೆರೆ ತುಂಬುವ ಯೋಜನೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ. ಸಿ. ಮಾಧುಸ್ವಾಮಿ ಹಾಗೂ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಸಿ. ಸಿ. ಪಾಟೀಲ್ ಅವರು ಸುಮಾರು 35 ಕೋಟಿ ರೂ ವೆಚ್ಚದ ಕೊಟ್ಟಲಗಿ – ನಿಪ್ಪಾಣಿ ರಸ್ತೆ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿದರು. ಆಗಲೂ ಕೂಡಾ ಕುಮಠಳ್ಳಿ ಗೈರಾಗಿದ್ದರು. ನಿನ್ನೆ (ರವಿವಾರ) ಅಥಣಿ ಹೊರವಲಯದಲ್ಲಿರುವ ಹಳ್ಯಾಳ ರೈತ ಸಭಾ ಭವನದಲ್ಲಿ ತಳವಾರ ಸಮುದಾಯದಿಂದ ಅಭಿನಂದನೆ ಸಮಾವೇಶಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಗೈರಾಗಿದ್ದಾರೆ.



ಕಳೆದ ಮೂರು ಕಾರ್ಯಕ್ರಮಕ್ಕೆ ಸಚಿವರು ಸ್ವ ಕ್ಷೇತ್ರಕ್ಕೂ ಬಂದರೂ ಶಾಸಕ ಮಹೇಶ ಕುಮಠಳ್ಳಿ ಗೈರಾಗಿದ್ದಾರೆ. ಯಾವುದೇ ಸಚಿವರು ಕ್ಷೇತ್ರಕ್ಕೆ ಬಂದಾಗ ಅವರನ್ನ ಅಹ್ವಾನ ಮಾಡಬೇಕಾದದ್ದು ಆ ಕ್ಷೇತ್ರದ ಶಾಸಕರು. ಆದರೆ, ಪ್ರತಿಸಲ ಸಚಿವರು ಬಂದಾಗ ಆಹ್ವಾನ ಮಾಡೊದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಒಂದೆರಡ ಸಲ ಯಾವುದೇ ಕಾರ್ಯಕ್ರಮಕ್ಕೆ ಹೋದರು ಮೂರನೇ ಸಲಕ್ಕಾದರೂ ಶಾಸಕ ಮಹೇಶ ಕುಮಠಳ್ಳಿ ಸಚಿವರ ಕಾರ್ಯಕ್ರಮಕ್ಕೆ ಭಾಗಿಯಾಗಬೇಕಿತ್ತು ಅಂತ ಅಥಣಿ ಮತಕ್ಷೇತ್ರದ ಜನ ಮಾತನಾಡಿಕೊಳ್ಳುತ್ತುದ್ದಾರೆ.














