ಇತ್ತೀಚಿನ ಸುದ್ದಿ
95 ಲಕ್ಷ ವೆಚ್ಚದಲ್ಲಿ ಪ್ರಥಮ ಹಂತದ ಮಾಲಾಡಿ ಕೋರ್ಟ್ – ಕಾವೂರು ಸಂಪರ್ಕ ರಸ್ತೆ ಲೋಕಾರ್ಪಣೆ
14/11/2022, 21:18
ಮಂಗಳೂರು(reporterkarnataka.com): ನಗರದ ಬಂಗ್ರ ಕೂಳೂರು ವಾರ್ಡ್ ನಂಬರ್ 16ರ ಮಾಲಾಡಿ ಕೋರ್ಟ್ ರಸ್ತೆಯನ್ನು ಪ್ರಥಮ ಹಂತದಲ್ಲಿ 95 ಲಕ್ಷ ರೂ.ವೆಚ್ಚದಲ್ಲಿ ಕಾಂಕ್ರಿಟ್ ಮಾಡಲಾಗಿದ್ದು, ಶಾಸಕರಾದ ಡಾ. ಭರತ್ ಶೆಟ್ಟಿ ಭಾನುವಾರ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಈ ರಸ್ತೆಯ ಸಂಪೂರ್ಣ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ1.50 ಕೋಟಿ ರೂ. ಹಾಗೂ ಎಂ.ವಿ. ಶೆಟ್ಟಿ ಕಾಲೇಜು ವರೆಗೆ ಮುಂದುವರಿದ ರಸ್ತೆಗೆ
50 ಲಕ್ಷ ರೂಪಾಯಿ ಮೀಸಲು ಇಡಲಾಗಿದೆ .ಈ ಭಾಗದಲ್ಲಿ ವಸತಿ ಬಡಾವಣೆ ಹೆಚ್ಚುತ್ತಿದ್ದು ಜನಸಂಖ್ಯೆಯೂ ಏರುತ್ತಿದೆ.ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು.
ಕಾರ್ಪೊರೇಟರ್ ಕಿರಣ್ ಕುಮಾರ್ ಕೋಡಿಕಲ್ ಅವರು ಮಾತನಾಡಿ, ಕೃತಕ ನೆರೆ ಉಂಟಾಗದಂತೆ ಇಲ್ಲಿರುವ ಸೇತುವೆಯನ್ನು ಮೇಲ್ದರ್ಜೆಗೆ ಏರಿಸುವುದು. ಮಳೆ ನೀರು ಹರಿಯಲು ಚರಂಡಿ ವ್ಯವಸ್ಥೆ ಹಂತ ಹಂತವಾಗಿ ಮಾಡಲಾಗುದು. ಇದೀಗ ಬಹು ವರ್ಷದ ಬೇಡಿಕೆಯನ್ನು ಈಡೇರಿಸಲಾಗಿದೆ. ಸುಸಜ್ಜಿತ ರಸ್ತೆ ನಿರ್ಮಾಣಗೊಂಡಿದೆ ಎಂದರು.
ಉದ್ಘಾಟನೆ ಕಾರ್ಯಕ್ರಮದ ಸಂದರ್ಭ ಸುಧೀರ್ ಭಂಡಾರಿ, ಸುರೇಶ್ ಭಂಡಾರಿ, ಬಾಲಕೃಷ್ಣ ಶೆಟ್ಟಿ, ಬಿ.ಎನ್. ಅಶೋಕ್, ಗಣಪತಿ ಭಟ್, ಮಂಜುನಾಥ್ ಪೈ, ಗಣೇಶ್ ಭಟ್, ಸ್ಥಳೀಯ ಗುರುದ್ವಾರದ ಧ್ಯಾನಿಕರಂ ಸಿಂಗ್ ಗುರೂಜಿ, ಡಾ.ಆಶಾಜ್ಯೋತಿ ರೈ, ಮೀರಾ ಕರ್ಕೇರ, ಕಮಲಾಕ್ಷಿ ಶೆಟ್ಟಿ, ಶೀತಲ್, ಪರಮೇಶ್ವರಿ,ಜಯಕೃಷ್ಣರಾವ್, ಈಶ್ವರ ಭಟ್, ಬಿಜೆಪಿಯ ಮುಖಂಡರಾದ ಉಮೇಶ್ ಮಾಲರಾ ಸಾನ, ಜಯಪ್ರಕಾಶ್ ಮತ್ತಿತರ ಕಾರ್ಯಕರ್ತರು,ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.














