ಇತ್ತೀಚಿನ ಸುದ್ದಿ
ಕುಲಶೇಖರ: ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ಚಾಲನೆ
13/11/2022, 10:42

ಮಂಗಳೂರು(reporterkarnataka.com): ನಗರದ ಪದವು ಪೂರ್ವ ವಾರ್ಡಿನ ಕುಲಶೇಖರದಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಕುಲಶೇಖರ ವೀರ ನಾರಾಯಣ ಕಟ್ಟೆಯ ಬಳಿಯಿಂದ ಒಳಗಡೆ ಹೋಗುವ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಪರಿಸರದ ಜನರ ಬೇಡಿಕೆಯಂತೆ 13 ಲಕ್ಷ ರೂಪಾಯಿ ಅನುಗಾನ ಬಿಡುಗಡೆಗೊಳಿಸಿದ್ದು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಸ್ಥಳೀಯ ಕಾರ್ಪೋರೇಟರ್ ಭಾಸ್ಕರ್ ಮೊಯ್ಲಿ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ಅಜಯ್ ಕುಲಶೇಖರ, ಅನಿಲ್ ರಾವ್, ಮಂಜುಳಾ ರಾವ್, ಅಶ್ವಿತ್ ಕೊಟ್ಟಾರಿ, ವಿತು, ಹರಿಣಿ ಪ್ರೇಮ್,ವಸಂತ್ ಆಚಾರ್ಯ, ಉದಯ್ ಚೌಕಿ, ಗೋಪಿಯಕ್ಕ, ಯಶೋಧ, ಕುಂಞ ರಾಮ, ಅರುಣ್ ರಾವ್, ಯೋಗಿಶ್ ಚೌಕಿ, ದಿನೇಶ್, ಸುಶಾಂತ್ ಕೋಟಿಮುರ, ಭಾರತಿ, ಉಷಾ, ಮೆಲ್ವಿನ್, ನಾಗರಾಜ ಆಚಾರ್ಯ, ಫ್ರಾನ್ಸಿಸ್, ಅಭಿಲಾಷ್, ಸಮರ್ಥ, ಅಂಕಿತ್, ಲೋಕೇಶ್ ಚೌಕಿ, ಅಶ್ವಿನ್ ಅಮೀನ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.