11:53 AM Friday13 - February 2026
ಬ್ರೇಕಿಂಗ್ ನ್ಯೂಸ್
ಒಟಿಪಿ ಸೋರಿಕೆ: ವಂಚನೆ ತಡೆಗಟ್ಟಲು ಏರ್‌ ಟೆಲ್‌ ನಿಂದ ಹೊಸ ಎಐ ಚಾಲಿತ… ಮಾಜಿ ಪ್ರಧಾನಿ ಎಚ್ಡಿಡಿ ಮಧ್ಯಪ್ರವೇಶ: ಕಾಫಿ ತೋಟಗಳ ಆನ್-ಲೈನ್ ಹರಾಜು ತಕ್ಷಣವೇ ಸ್ಥತಿತಗೊಳಿಸುವಂತೆ… ಕಾಲವೇ ಉತ್ತರ ಕೊಡುತ್ತೆ: ಸೋನಿಯಾ, ರಾಹುಲ್, ಪ್ರಿಯಾಂಕ ಭೇಟಿ ಬಳಿಕ ಡಿಸಿಎಂ ಡಿಕೆಶಿ… ಶಿವಣ್ಣನ ಶಿವಭಕ್ತಿ: ಶಿವರಾತ್ರಿಯ ಅಂಗವಾಗಿ 37 ವರ್ಷಗಳಿಂದ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ! ದಕ್ಷಿಣ ಕೊಡಗಿನಲ್ಲಿ ಆತಂಕದ ಸೃಷ್ಟಿಸಿದ್ದ ವ್ಯಾಘ್ರ ಕೊನೆಗೂ ಸೆರೆ: ಬಲೆಗೆ ಬಿದ್ದ ಗಂಡು… ತೇಜಸ್ವಿ ಸೂರ್ಯ ಬಂಧನ ಮಾಡಿಸಿದ ಸಿದ್ದರಾಮಯ್ಯ ಪುಕ್ಕಲ ಸಿಎಂ: ಪ್ರತಾಪ್‌ ಸಿಂಹ ಕಿಡಿ ಚಿಕ್ಕಮಗಳೂರು: ಕಾಫಿ ತೋಟದ ಇಬ್ಬರು ಮಹಿಳಾ ಕಾರ್ಮಿಕರ ಮೇಲೆ ಚಿರತೆ ದಾಳಿ; ಆಸ್ಪತ್ರೆಗೆ… ಎಚ್ ಡಿ ಕೋಟೆ | ಕಂಚಮಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮೇಲೆ ಭಾರೀ… Kodagu | ಕುಶಾಲನಗರ: ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಕ್ರೇಟಾ ಕಾರು; ಅದೃಷ್ಟವಶಾತ್… ಇ-ಸ್ವತ್ತು ತಂತ್ರಾಂಶದಲ್ಲಿ ಬದಲಾವಣೆ ಮೂಲಕ ಸಾರ್ವಜನಿಕರಿಗೆ ತ್ವರಿತ ಸೇವೆಗೆ ಕ್ರಮ: ಗ್ರಾಮೀಣಾಭಿವೃದ್ಧಿ ಸಚಿವ…

ಇತ್ತೀಚಿನ ಸುದ್ದಿ

ವಿಜಯನಗರ: ಐತಿಹಾಸಿಕ ಕೋಟೆ ವೀರನದುರ್ಗಕ್ಕೆ ಕಲ್ಲು ಗಣಿ ಕಳ್ಳರ ಕನ್ನ!; ಜಿಲ್ಲಾಡಳಿತ ಮೌನ!!

11/11/2022, 17:01

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮೊರಬ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ, ಐತಿಹಾಸಿಕ ಕೋಟೆ ವೀರನದುರ್ಗ. ಸ್ಥಳೀಯ ಕಲ್ಲು ಗಣಿಕಳ್ಳರ ಕನ್ನಕ್ಕೆ ಬಲಿಯಾಗುತ್ತಿದೆಯಾ.!? ಎಂಬ ಆತಂಕದ ಪ್ರೆಶ್ನೆ. ಅಲ್ಲಿ ಗೋಚರಿಸುವ ದುರಂತ ಸನ್ನಿವೇಶಗಳಿಂದ, ಎಂತಹವರಲ್ಲಿಯೂ ಮೂಡದೇ ಇರದು. ಕಾರಣ ಪಾಳೇಗಾರರ ಆಳ್ವಿಕೆ ಇತಿಹಾಸವನ್ನು ಸಾರುವ ವೀರದುರ್ಗ ಹಾಗೂ ಕೋಟೆ ಈಗ ಅಳಿವಿನಂಚಿನಲ್ಲಿದೆ. ಅಕ್ರಮ ಕಲ್ಲು ಗಣಿಗಾರಿಕೆಯಿಂದ ನಶಿಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಭವ್ಯ ಇತಿಹಾಸವನ್ನು ಸಾದರ ಪಡಿಸುವ ವೀರನದುರ್ಗ ಅಕ್ರಮ ಕಲ್ಲು ಗಣಿ ಕಳ್ಳರ ಕನ್ನಕ್ಕೆ, ಸಂಪೂರ್ಣ ಹಾನಿಯಾಗಿದೆ ಅವರೊಂದಿಗೆ ಸ್ಥಳೀಯ ಆಡಳಿತ ಪರೋಕ್ಷ ಮೌನ ಸಮ್ಮತಿ ನೀಡಿದೆ ಎಂದು ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೆಲ ವರ್ಷಗಳಿಂದ ವೀರನ ದುರ್ಗಕ್ಕೆ ಅಂಟಿಕೊಂಡಂತಿರುವ ಕಲ್ಲು ಕ್ವಾರಿಗೆ, ಪರವಾನಗಿ ಪಡೆದ ಕ್ವಾರಿ ಮಾಲೀಕರು. ನಿಯಗಳನ್ನ ಗಾಳಿಗೆ ತೂರಿ ವೀರನ ದುರ್ಗಕ್ಕೆ ಲಗ್ಗೆ ಹಾಕಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದ್ದಾರೆಂದು ಗ್ರಾಮದ ಹಿರಿಯರು ಹಾಗೂ ಕೆಲ ಸಂಘಟನೆಗಳ ಹೋರಾಟಗಾರರು ದೂರಿದ್ದಾರೆ. ಸಂಬಂಧಿಸಿದಂತೆ ಹಲವು ವರ್ಷಗಳಿಂದ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ವೀರನ ದುರ್ಗವನ್ನು ಸಂರಕ್ಷಣೆ ಮಾಡಬೇಕು ಮತ್ತು ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಕ್ರಮಕ್ಕಾಗಿ ಜಿಲ್ಲಾಡಾಳಿತಕ್ಕೆ ಒತ್ತಾಯಿಸಿದ್ದರು. ಪರಿಣಾಮ ಇತ್ತೀಚೆಗಷ್ಟೇ ಕ್ವಾರಿ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಜಿಲ್ಲಾಡಳಿತ ಆದೇಶಿಸಿತ್ತು, ಅಂತೆಯೇ ತಾಲೂಕಾಡಳಿತ ಕ್ವಾರಿ ಸ್ಥಗಿತಗೊಳಿಸಿ ಕ್ರಮ ಜರುಗಿಸಿತ್ತು. ಆದ್ರೆ ಮತ್ತೆ ಕ್ವಾರಿ ಕಾಮಗಾರಿ ಮತ್ತೆ ಪ್ರಾರಂಭಿಸಲಾಗಿದೆ, ತಹಶಿಲ್ದಾರರ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಕಾರಣ ಸಂಬಂಧಿಸಿದಂತೆ ರಾಜ್ಯಪಾಲರಲ್ಲಿ ಹಾಗೂ ಎಸಿಬಿ, ಮತ್ತು ಲೋಕಾಯುಕ್ತ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳಲ್ಲಿ ದೂರು ನೀಡಲಾಗುವುದು. ಅದಕ್ಕಾಗಿ ತಾವು ಅಗತ್ಯ ದಾಖಲು ಪುರಾವೆಗಳೊಂದಿಗೆ, ಉನ್ನತಾಧಿಕಾರಿಗಳ ಮೂಲಕ ಮತ್ತು ಮಾಧ್ಯಮಗಳ ಮೂಲಕ ದೂರು ನೀಡಲು ಸಿದ್ಧರಾಗಿರುವುದಾಗಿ ಹೋರಾಟಗಾರರು ತಿಳಿಸಿದ್ದಾರೆ. ವೀರನ ದುರ್ಗದ ಉಳಿವಿಗಾಗಿ ತಾವು ಕಾನೂನಿನ ಅಡಿಯಲ್ಲಿ, ಹೋರಾಟ ಮಾಡಲು ಸರ್ವರೀತಿಯಲ್ಲಿ ಸನ್ನದ್ಧರಾಗಿರಿವುದಾಗಿ ಹೋರಾಟಗಾರರು ಹೇಳಿಕೆ ನೀಡಿದ್ದಾರೆ. ಅಕ್ರಮ ಕಲ್ಲು ಗಣಿ ಕಳ್ಳರಿಗೆ ಬುದ್ದಿ ಕಲಿಸಬೇಕು ಹಾಗೂ ವೀರನ ದುರ್ಗ ಉಳಿಯಬೇಕಿದೆ, ಅದಕ್ಕಾಗಿ ತಾವು ಹೋರಾಟ ಮಾಡುವುದು ಖಚಿತ ಎಂದು ಹೋರಾಟಗಾರರು ನುಡಿದಿದ್ದಾರೆ. ರಾಜ್ಯ ಮಟ್ಟದಲ್ಲಿ, ಕಾನುನಾತ್ಮಕವಾಗಿ ಹಂತ ಹಂತವಾಗಿ ತಾವು ಹೋರಾಟ ಮಾಡಲು ಸಿದ್ಧರಿದ್ದು. ಅದಕ್ಕಾಗಿ ಸಂಬಂಧಿಸಿದ ಇಲಾಖೆಗಳ ರಾಜ್ಯ ಮಟ್ಟದ ಅಧಿಕಾರಿಗಳ ನೆರವಿನೊಂದಿಗೆ, ಮಾಧ್ಯಮಗಳು ಹಾಗೂ ನ್ಯಾಯಾಲಯದ ಮೊರೆ ಹೋಗುವುದಾಗಿ ಹೋರಾಟಗಾರರು ತಿಳಿಸಿದ್ದಾರೆ. *ಸ್ಪಷ್ಟನೆ*-ಸಂಬಂಧಿಸಿದಂತೆ ಕಲ್ಲು ಗಣಿ ಕ್ವಾರಿ ಮಾಲೀಕರನ್ನು ಸಂಪರ್ಕಿಸಿದಾಗ, ತಮ್ಮದೇನು ತಪ್ಪಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ಸಂಬಂಧಿಸಿದಂತೆ ಸಂಬಂಧಿಸಿದ ಸ್ಥಳೀಯ ಆಡಳಿತಗಳಿಂದ, ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳಿಂದ ಅಗತ್ಯ ಪರವಾನಗಿ ಪಡೆಯಲಾಗಿದೆ. ಯಾವುದೆ ಪುರಾತನ ಸ್ಥಳಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಮಾಡಿಲ್ಲ, ಕಾನೂನಿನ ನಿಯಮಗಳನ್ವಯ ಕಲ್ಲು ಕ್ವಾರಿ ನಡೆಸಲಾಗುತ್ತಿದೆ. ಸಂಬಂಧಿಸಿದಂತೆ ತಾಲೂಕಾಡಳಿತಾಧಿಕಾರಿಗಳು ಸ್ಥಳ ಪರಿಶೀಲಿಸಿದ್ದು, ಕಾನೂನಾತ್ಮಕವಾಗಿ ಕಲ್ಲು ಕ್ವಾರಿ ಗಣಿಗಾರಿಕೆಯನ್ನ ನಡೆಸಲು ಅನುಮತಿ ಪಡೆಯಲಾಗಿದೆ. ತಮ್ಮ ಕ್ವಾರಿ ಕಲ್ಲು ಗಣಿಗಾರಿಕೆಯಿಂದ ಈವರೆಗೂ ವೀರನ ದುರ್ಗಕ್ಕೆ ಹಾಗೂ ಕೋಟೆಗೆ, ಯಾವುದೇ ರೀತಿಯಲ್ಲಿ ಕಿಂಚಿತ್ತು ತೊಂದರೆ ಆಗಿಲ್ಲ. ಸರ್ವ ಅನುಮತಿ ಗಳ ಹಾಗೂ ಪರವಾನಗಿ ಹೊಂದಿ, ಕ್ವಾರಿ ಕಲ್ಲು ಗಣಿ ಗಾರಿಕೆ ನಡೆಸಲಾಗುತ್ತದೆ ಎಂದು ಮಾಲೀಕರು ಮಾಧ್ಯಮಕ್ಕೆ ಸ್ಪಷ್ಟಪಡುಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು