ಇತ್ತೀಚಿನ ಸುದ್ದಿ
ಕುಲಶೇಖರ ಕೋಟಿಮುರ ಕಾಲೋನಿಯಲ್ಲಿ 25 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ
08/11/2022, 19:52

ಮಂಗಳೂರು(reporterkarnataka.com):ಮಂಗಳೂರು ಮಹಾನಗರ ಪಾಲಿಕೆಯ ಕುಲಶೇಖರ ಕೋಟಿಮುರ ಕಾಲೋನಿಯಲ್ಲಿ 25 ಲಕ್ಷ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ಕುಲಶೇಖರ ಕೋಟಿಮುರದಲ್ಲಿ ಕಾಲೋನಿ ಅಭಿವೃದ್ಧಿಗೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಿಂದ 25 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ನಗರದ ಪ್ರಮುಖ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಸ್ಥಳೀಯ ಕಾರ್ಪೋರೇಟರ್ ಭಾಸ್ಕರೇ ಮೈೂಯ್ಲಿ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ಅಜಯ್ ಕುಲಶೇಖರ, ಅನಿಲ್ ರಾವ್, ಮಂಜುಳಾ ರಾವ್, ಹರಿಣಿ ಪ್ರೇಮ್, ಯೋಗಿಶ್ ಚೌಕಿ, ಎ.ಪಿ ಪ್ರಭು, ದಿನೇಶ್ ಕೋಟಿಮುರ, ಅರುಣ್ ರಾವ್, ಸತೀಶ್ ಬೈತುರ್ಲಿ, ದಿನೇಶ್ ಜ್ಯೋತಿನಗರ, ಸತೀಶ್ ಕೋಟಿಮುರ, ನವೀನ್, ವಸಂತಿ ಆಚಾರ್ಯ, ಉಮೇಶ್, ಸುಶಾಂತ್ ಕೋಟಿಮುರ, ಫ್ರಾನ್ಸಿನ್ ಅರೋರ, ಪ್ರೇಮ, ಭವಾನಿ, ಯಶವಂತ ಡೈರಿ, ಪಾಂಡುರಂಗ ಕೋಟಿಮುರ, ರಾಜೇಂದ್ರ ಬೈತುರ್ಲಿ ಮುಂತಾದವರು ಉಪಸ್ಥಿತರಿದ್ದರು.