ಇತ್ತೀಚಿನ ಸುದ್ದಿ
ಲಿಂಗಸುಗೂರು: ತಾಂಡಗಳ ಅಪೌಷ್ಠಿಕ ಮಕ್ಕಳ ತಪಾಸಣೆ; ಮೊಟ್ಟೆ, ಪೌಷ್ಠಿಕ ಆಹಾರ ವಿತರಣೆಗೆ ವ್ಯವಸ್ಥೆ
01/07/2021, 16:14

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಲಿಂಗಸುಗೂರು ತಾಲೂಕಿನ ಮಹಿಳಾ ಮಕ್ಕಳ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶರಣಮ್ಮ ಕರ್ನೂರ್ ಅವರು ಗುರುವಾರ ಲಿಂಗಸುಗೂರು ತಾಲೂಕಿನ ತಾಂಡ ಹಳ್ಳಿಗಳ ದೊಡ್ಡಿಗಳಿಗೆ ತೆರಳಿ ಅಪೌಷ್ಟಿಕ ಮಕ್ಕಳ ತೂಕವನ್ನು ಹಾಕಲಾಯಿತು ಮತ್ತು ತೀವ್ರ ಅಪೌಷ್ಠಿಕ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತೀವ್ರ ಅಪೌಷ್ಠಿಕ ಮಕ್ಕಳ ಮನೆ ಭೇಟಿ ಮಾಡಿ,ಅಂಗನವಾಡಿ ಫಲಾನುಭವಿಗಳಿಗೆ ಮೊಟ್ಟೆ ಮತ್ತು ಪೂರಕ ಪೌಷ್ಠಿಕ ಆಹಾರವನ್ನು ವಿತರಿಸಲಾಗುತ್ತಿದೆ.
ಹೃದಯ ಚಿಕಿತ್ಸೆಗೆ ತಾಲೂಕು ಆರೋಗ್ಯ ಅಧಿಕಾರಿಗೆ ದಿನಾಂಕ ನೀಡಲು ಕೇಳಲಾಗಿದೆ. ವಲಸೆ ಮಕ್ಕಳಿಗೂ, ಗರ್ಭಿಣಿ, ಬಾಣಂತಿ ಯಾರಿಗೂ ದಾಖಲಿಸಿಕೊಂಡು ಇಲಾಖೆಯ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರಾಜೇಶ್ವರಿ ಶ್ರೀನಿವಾಸ್ ಮಸ್ಕಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು ಸಹಾಯಕರು ಹಾಜರಿದ್ದರು.