ಇತ್ತೀಚಿನ ಸುದ್ದಿ
ವಿಟ್ಲ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ: ಮತ್ತೆ 3 ಮಂದಿ ಬಂಧನ
05/11/2022, 19:36

ವಿಟ್ಲ(reporterkarnataka.com); ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 3 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ
ಸಂಶೀರ್ (21),ಕನ್ಯಾನ ಸಜಾದ್ (22) ಹಾಗೂ ಆಸಿಫ್ ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ಬಾಲಕಿ ಅ.23 ರಂದು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಅ.24 ರಂದು ಬಾಲಕಿ ಪತ್ತೆಯಾಗಿದ್ದಳು. ಬಳಿಕ ಬಾಲಕಿಯ ವೈದ್ಯಕೀಯ ತಪಾಸಣೆ ನಡೆಸಿದಾಗ ಆಕೆ ಮೇಲೆ ಅತ್ಯಾಚಾರ ನಡೆಸಿರುವುದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಅಪಹರಣ ಮತ್ತು ಪೋಕ್ಸೋ ಕಾಯ್ದೆಯಡಿ ಕನ್ಯಾನ ಸಜಾದ್ (22) ಹಾಗೂ ಆಸಿಫ್ ಬಂಧಿತರಾಗಿದ್ದಾರೆ.
ಕಬಕದ ಸಂಶೀರ್ ಈಕೆಯನ್ನು ಪ್ರೀತಿಸಿ ಅತ್ಯಾಚಾರ ನಡೆಸಿದ್ದಾನೆ. ನಂತರ ತನ್ನ ಸ್ನೇಹಿತರಿಗೂ ಆಕೆಯನ್ನು ಒಪ್ಪಿಸಿದ್ದ ಎಂದು ತಿಳಿದು ಬಂದಿದೆ.