ಇತ್ತೀಚಿನ ಸುದ್ದಿ
ಕಾಗವಾಡ: ಕೆಎಸ್ಸಾರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ; ವ್ಯಕ್ತಿ ಸ್ಥಳದಲ್ಲೇ ಸಾವು
04/11/2022, 15:01
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಬೆಳಗಾವಿ ಜಿಲ್ಲೆಯ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೇಡರಹಟ್ಟಿ – ಅಥಣಿ ಮಾರ್ಗದ ನಡುವೆ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮವಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿ ಬೇಡರಹಟ್ಟಿ ಗ್ರಾಮದ ನಿವಾಸಿಯಾದ ಸಿದ್ದಪ್ಪಾ ವಾಲಿ (37) ಎಂದು ತಿಳಿದು ಬಂದಿದೆ.

ಇವರು ಬೇಡರಹಟ್ಟಿ ಗ್ರಾಮದಿಂದ ಅಥಣಿ ಪಟ್ಟಣಕ್ಕೆ ಬೈಕ್ ಮೇಲೆ ತೆರಳುವ ಪಾರ್ಥನಹಳ್ಳಿ ಗ್ರಾಮದ ಸಮೀಪ ಬಸ್ ಹಾಗೂ ಬೈಕ್ ನಡುವೆ ಅಫಘಾತ ಸಂಭವಿಸಿ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಅಥಣಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅಥಣಿ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.














