6:02 PM Friday14 - November 2025
ಬ್ರೇಕಿಂಗ್ ನ್ಯೂಸ್
ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ…

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಅಕ್ಟೋಬರ್ ತಿಂಗಳ ಟಾಪರ್ ಆಗಿ ಶರಣ್ ರೈ ಹಾಗೂ ಶ್ರೀಸ್ತುತಿ ಆಯ್ಕೆ

02/11/2022, 18:48

ಮೂಡುಬಿದರೆ(reporter Karnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಅಕ್ಟೋಬರ್ ತಿಂಗಳ ಟಾಪರ್ ಆಗಿ ಶರಣ್ ರೈ ಹಾಗೂ ಶ್ರೀಸ್ತುತಿ ಆಯ್ಕೆಗೊಂಡಿದ್ದಾರೆ.

ಕಾಸರಗೋಡಿನ ಜಯಪ್ರಕಾಶ್ ರೈ ಹಾಗೂ ಜಯಸಾಧನ ದಂಪತಿಯ ಪುತ್ರನಾದ ಶರಣ್ ರೈ ಕಾಸರಗೋಡು 9ನೇ ವಯಸ್ಸಿನ ಬಾಲಕ. ಈತ
ಕಾಸರಗೋಡು ಅನಂಗೂರ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಶರಣ್ ಗೆ ಸಣ್ಣದಿಂದಲೇ ಚಿತ್ರಕಲೇ, ಭಾಷಣ, ಹಾಡು, ನೃತ್ಯ, ಆಟ ಇತ್ಯಾದಿಗಳಲ್ಲಿ ಬಹಳ ಆಸಕ್ತಿ ಇತ್ತು. ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪತ್ರಗಳನ್ನು ಪಡೆದಿರುತ್ತಾನೆ. ಶಾಲಾ ಕಲೋತ್ಸವದಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿರುತ್ತಾನೆ. ಈ ವರ್ಷದ ಕ್ಲೇ ಮಾಡಿಲಿಂಗ್ ಸ್ಪರ್ಧೆ ಯಲ್ಲಿ ಕಾಸರಗೋಡು ಸಬ್ ಜಿಲ್ಲಾ ಕಲೋತ್ಸವ ದಲ್ಲಿ ಸಿ ಗ್ರೇಡ್ ಪಡೆದಿರುತ್ತಾನೆ. ಗೂಡು ದೀಪ ಸ್ಪರ್ಧೆಯ ಮೂಲಕ ವಾಯ್ಸ್ ಆಫ್ ಆರಾಧನಾ ತಂಡಕ್ಕೆ ಸೇರಿ ಉದಯೋನ್ಮುಖ ಪ್ರತಿಭೆ ಎಂದು ಗುರುತಿಸಿ ಕೊಂಡಿದ್ದಾರೆ. ಕರ್ನಾಟಕ ಜನಸ್ಪಂದನ ಟ್ರಸ್ಟ್ ವತಿಯಿಂದ ನಡೆಸಿದ ಹಲವು ಸ್ಪರ್ಧೆ ಗಳಲ್ಲಿ ಭಾಗವಹಿಸಿದ್ದಾನೆ. ಈಗ ಗುರುಗಳಾದ ವಿಶ್ವನಾಥ್ ಅಡೂರ್ ಅವರಲ್ಲಿ ಕುಣಿತ ಭಜನೆ ಹಾಗೂ ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಅವರ ಬಳಿ ಯಕ್ಷಗಾನ ಕಲಿಯುತಿದ್ದಾನೆ.


ಶ್ರೀಸ್ತುತಿ ಜಿ. ಕೆ. 4 ವರ್ಷದ ಪುಟಾಣಿ. ಈಕೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ವಾಸಿಸುತ್ತಿದ್ದಾಳೆ. ಹೊಸನಗರದ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಎಲ್ ಕೆ ಜಿ ಓದುತ್ತಿದ್ದಾಳೆ.
ಗಿರೀಶ ಹಾಗೂ ಮಂಗಳಾ ದಂಪತಿಯ ಮಗಳಾದ ಶ್ರೀಸ್ತುತಿ ಲಾಕ್ಡೌನ್ ಸಮಯದಲ್ಲಿ ಕರ್ನಾಟಕ ಜನಸ್ಪಂದನ ಟ್ರಸ್ಟ್ ಗೆ ಸೇರಿ ಅಲ್ಲಿ ಒಟ್ಟು 15 ಆನ್ಲೈನ್ ಸ್ಪರ್ಧೆಯಲ್ಲಿ ಎಲ್ಲದರಲ್ಲೂ ಪ್ರಥಮ ಮತ್ತು ದ್ವಿತೀಯ ಬಹುಮಾನ ಗಳಿಸಿ ಜನಸ್ಪಂದನ ಕಲಾ ಸಿರಿ ರತ್ನ ಪ್ರಶಸ್ತಿ – 2022 ಪಡೆದಿದ್ದಾಳೆ.
ವಾಯ್ಸ್ ಆಫ್ ಆರಾಧನಾ ಪ್ರತಿ ದಿನದ ಟಾಸ್ಕ್ ಅಲ್ಲಿ ಭಾಗವಹಿಸಿ ಮಾರ್ಚ್, ಜೂನ್ ಮತ್ತು ಅಕ್ಟೋಬರ್ ತಿಂಗಳ ವಿಜೇತ ಆಗಿದ್ದಾಳೆ. ಆರೂಢ ಕಾಲ ಬಳಗ ಅರ್ಪಿಸುವ ಸುಗ್ಗಿ ಸಂಭ್ರಮ ಆನ್ಲೈನ್ ಗಾಯನ ಸ್ಪರ್ದೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾಳೆ. ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನ ದವರು ಪ್ರತಿ ತಿಂಗಳು ನಡೆಸುವ ಆನ್ಲೈನ್ ಕಾರ್ಯಕ್ರಮದಲ್ಲಿ ಬಾಗವಹಿಸಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದಿದ್ದಾಳೆ.

ಐಕಾನ್ ಸ್ಟಾರ್ -2021 ಭಾಗವಹಿಸಿ ಅಭಿನಂದನಾ ಪತ್ರ ಪಡೆದಿದ್ದಾಳೆ. ಹೊಸನಗರದ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಕೃಷ್ಣ ವೇಷ ಪ್ರದರ್ಶನ ನೀಡಿ ಪ್ರಶಂಸಾ ಪತ್ರ ಪಡೆದಿರುತ್ತಾಳೆ. ಬ್ರಹ್ಮ ಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ನಡೆದ ಕೃಷ್ಣ ವೇಷ ಪ್ರದರ್ಶನ ನೀಡಿ ಬಹುಮಾನ ಪಡೆದಿದ್ದಾಳೆ. ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾಳೆ

ಇತ್ತೀಚಿನ ಸುದ್ದಿ

ಜಾಹೀರಾತು