1:42 PM Monday6 - May 2024
ಬ್ರೇಕಿಂಗ್ ನ್ಯೂಸ್
ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು… ಪ್ರಜ್ವಲ್ ರೇವಣ್ಣ ಪರ ಮತಯಾಚಿಸಿದ ಪ್ರಧಾನಿ ಮೋದಿ ಕ್ಷಮೆ ಕೇಳಲಿ: ಕಾಂಗ್ರೆಸ್ ನಾಯಕ…

ಇತ್ತೀಚಿನ ಸುದ್ದಿ

ತೊಕ್ಕೊಟ್ಟು ಬಳಿ ಎನ್ ಎಚ್ ಅತಿಕ್ರಮಣ: ವ್ಯಸನಿಗಳ ಜತೆ ಹೆದ್ದಾರಿಯನ್ನೇ ನುಂಗಿದ ಬಾರ್ ಆ್ಯಂಡ್ ರೆಸ್ಟೋರೆಂಟ್ !!

29/10/2022, 22:05

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಭೂ ಅತಿಕ್ರಮಣ ಸುದ್ದಿಯನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ನದಿ, ತೋಡು, ಹಳ್ಳ, ದಿಣ್ಣ, ಎಲ್ಲೆಂದರಲ್ಲಿ ಅತಿಕ್ರಮಣ ಅವ್ಯಾಹತವಾಗಿ ನಡೆಯುತ್ತಲೇ ಇರುತ್ತದೆ. ಇಂತಹ ಅತಿಕ್ರಮಣದ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಅದೇನೆಂದರೆ ರಾಷ್ಟ್ರೀಯ ಹೆದ್ದಾರಿಯನ್ನೇ ಅತಿಕ್ರಮಿಸಿದ್ದು.

ತೊಕ್ಕೊಟ್ಟು ಕಾಪಿಕಾಡ್ ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅತಿಕ್ರಮಣ ನಡೆದಿದೆ. ಬಾರ್ ಆಂಡ್ ರೆಸ್ಟೋರೆಂಟ್ ವೊಂದು ಹೆದ್ದಾರಿಯನ್ನು ಅತಿಕ್ರಮಿಸಿಕೊಂಡಿದೆ. ಬಾರ್ ಮಂದಿ ಹೆದ್ದಾರಿಯನ್ನು ಅತಿಕ್ರಮಿಸಿ
ತಮ್ಮ ಗ್ರಾಹಕರಿಗೆ ಪಾರ್ಕಿಂಗ್ ಸ್ಥಳವಾಗಿ ಮಾರ್ಪಡಿಸಿದ್ದಾರೆ. ಹೆದ್ದಾರಿಯ ಜಾಗಕ್ಕೆ ಇಂಟರ್ ಲಾಕ್ ಅಳವಡಿಸಿ ಶೃಂಗಾರ ಮಾಡಿದ್ದಾರೆ. ಪಾಪ, ಪಾದಚಾರಿಗಳಿಗೆ ನಡೆದಾಡಲು ಫುಟ್ ಪಾತ್ ಇಲ್ಲ. ಪಾದಚಾರಿಗಳು ನಡೆದಾಡುವ ಜಾಗವನ್ನೇ ಈ ಬಾರ್ ನವರು ಇದೀಗ ಅತಿಕ್ರಮಿಸಿಕೊಂಡಿರುವುದರಿಂದ ಜನ ಹೆದ್ದಾರಿ ರಸ್ತೆಯಲ್ಲಿ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸರ್ವೀಸ್ ರಸ್ತೆಗಾಗಿ ಕಾದಿರಿಸಲಾದ ಜಾಗದಲ್ಲಿ ಬಾರ್ ನವರು ಗಾರ್ಡನ್ ಹಾಗೂ ಕೌಂಟರ್ ನಿರ್ಮಿಸಿಕೊಂಡು ಮಾಡಿಕೊಂಡಿದ್ದಾರೆ. ಹೆದ್ದಾರಿ ಪ್ರಾಧಿಕಾರ ಬಾಯಿ ಮುಚ್ಚಿ ತೆಪ್ಪಗಿದೆ.

ತೊಕ್ಕೊಟ್ಟಿನಿಂದ ತಲಪಾಡಿ ತನಕದ ಹೆದ್ದಾರಿಯಲ್ಲಿ ಹೆದ್ದಾರಿ ಇಲಾಖೆಯ ಸ್ವಾಧೀನದ ಜಾಗದ ಎಲ್ಲಾ ಅಕ್ರಮ ಹಾಗೂ ಒತ್ತುವರಿಯನ್ನು ಈ ಹೆದ್ದಾರಿ ನಿರ್ವಹಣೆ ಮಾಡುವ ನವಯುಗ ಕಂಪನಿಯವರು ತೆರವು ಮಾಡಿದ್ದಾರೆ. ಆದರೆ ಕಾಪಿಕಾಡ್ ನಲ್ಲಿ ಇದೊಂದು ಬಾರ್ ಆಂಡ್ ರೆಸ್ಟೋರೆಂಟ್ ನ ಒತ್ತುವರಿಯನ್ನು ಮಾತ್ರ ತೆರವುಗೊಳಿಸದಿರುವುದು ಅನೇಕ ಅನುಮಾನವನ್ನು ಹುಟ್ಟು ಹಾಕಿದೆ.


ತೊಕ್ಕೊಟ್ಟು ಓವರ್ ಬ್ರಿಡ್ಜ್ ಜಂಕ್ಷನ್ ನಿಂದ ಕಾಪಿಕಾಡ್ ತನಕ ನಿರಂತರ ಅಪಘಾತಗಳು ನಡೆಯುತ್ತಿದೆ. ಕಾಪಿಕಾಡ್ ನಲ್ಲಿ ರುವ ಅವೈಜ್ಞಾನಿಕ “ಯೂ ಟರ್ನ್ ” ಕಾರಣದಿಂದಾಗಿ ನಿರಂತರ ಅಪಘಾತ ನಡೆಯುತ್ತಿದೆ.‌
ಇಲ್ಲಿನ ಅಪಘಾತ ನಿಯಂತ್ರಿಸು ಸಲುವಾಗಿ ಅವೈಜ್ಞಾನಿಕ ಯೂ ಟರ್ನ್ ಮುಚ್ಚುವಂತೆ ಹಾಗೂ ತೊಕ್ಕೊಟ್ಟಿನಿಂದ ಕುಂಪಲ ಬೈಪಾಸ್ ತನಕ ಎರಡೂ ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸುವಂತೆ ತೊಕ್ಕೊಟ್ಟು ಹೆದ್ದಾರಿ ಸುರಕ್ಷತಾ ಹೋರಾಟ ಸಮಿತಿಯು ಆಗ್ರಹಿಸಿತ್ತು.

ಸಮಿತಿಯು ಈ ಹಿನ್ನೆಲೆಯಲ್ಲಿ ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ನೀಡಿತ್ತು.
ಸಮಿತಿಯ ಮನವಿಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಹೆದ್ದಾರಿ ಪ್ರಾಧಿಕಾರದ ಯೋಜನಾ ಅಧಿಕಾರಿ ಸ್ಥಳ ಪರಿಶೀಲನೆ ಕೂಡ ನಡೆಸಿದ್ದಾರೆ. ಜಿಲ್ಲಾಧಿಕಾರಿ ಅವರು ಆಯೋಜಿಸಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯಲ್ಲಿ ಈ ರಸ್ತೆಯಲ್ಲಿನ ಅಪಘಾತ ನಿಯಂತ್ರಿಸುವ ಬಗ್ಗೆ ಪ್ರಸ್ತಾಪ ಕೂಡ ಆಗಿದೆ.

ಸಂಸದರ ಸೂಚನೆಯಂತೆ ಹೆದ್ದಾರಿ ಪ್ರಾಧಿಕಾರದ ಹಾಗೂ ಹೋರಾಟ ಸಮಿತಿಯ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ತಾತ್ಕಾಲಿಕವಾಗಿ ಹೆದ್ದಾರಿ ಬದಿಯಲ್ಲಿ ಪಾದಚಾರಿ ರಸ್ತೆಯನ್ನು ನಿರ್ಮಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭರವಸೆ ನೀಡಿದ್ದರು. ಈ ಸಭೆಯಲ್ಲಿ ಬಾರ್ ನವರು ರಸ್ತೆಯನ್ನು ಅತಿಕ್ರಮಣ ಮಾಡಿರುವ ಬಗ್ಗೆ ಪ್ರಸ್ತಾಪವಾಗಿತ್ತು. ತಕ್ಷಣವೇ ಬಾರ್ ನವರು ಮಾಡಿರುವ ಎಲ್ಲಾ ಅಕ್ರಮ ನಿರ್ಮಾಣ ಹಾಗೂ ರಸ್ತೆ ಅತಿಕ್ರಮಣವನ್ನು ತೆರವುಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರದ ಯೋಜನಾ ಅಧಿಕಾರಿ ಲಿಂಗೇ ಗೌಡ ಅವರು ಸಭೆಯಲ್ಲಿ ಉಪಸ್ಥಿತಿರಿದ್ದ ನವಯುಗ ಕಂಪೆನಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಸಭೆ ನಡೆದು 5 ದಿನವಾದರೂ ಬಾರ್ ಆಂಡ್ ರೆಸ್ಟೋರೆಂಟ್ ನವರು ಮಾಡಿರುವ ಅಕ್ರಮ ನಿರ್ಮಾಣ , ಅತಿಕ್ರಮಣದ ಬಗ್ಗೆ ಯಾವುದೇ ಕ್ರಮ ಜರುಗಿಸಲಾಗಿಲ್ಲ.

ಈ ನಡುವೆ ಅ.26ರಂದು ಹೆದ್ದಾರಿ ಪ್ರಾಧಿಕಾರವು ತಲಪಾಡಿಯಿಂದ ಕುಂದಾಪುರ ತನಕ ಹೆದ್ದಾರಿ ಬದಿಯ ಎಲ್ಲಾ ಅತಿಕ್ರಮಣಗಳನ್ನು ತೆರವು ಮಾಡುವಂತೆ ನವಯುಗ ಕಂಪೆನಿಗೆ ಆದೇಶ ಹೊರಡಿಸಿದೆ. ಹೆದ್ದಾರಿ ಇಲಾಖೆಯ ಲಿಖಿತ ಆದೇಶ ಜಾರಿಯಾದರೂ ತೊಕ್ಕೊಟ್ಟು ಕಾಪಿಕಾಡ್ ನಲ್ಲಿ ಬಾರ್ ನವರು ಮಾಡಿರುವ ಅತಿಕ್ರಮಣವನ್ನು ತೆರವುಗೊಳಿಸಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

ಇತ್ತೀಚಿನ ಸುದ್ದಿ

ಜಾಹೀರಾತು