ಇತ್ತೀಚಿನ ಸುದ್ದಿ
ಮಂಗಳೂರು: ಓವರ್ ಟೇಕ್ ಭರಾಟೆ; ನಿಂತಿದ್ದ ಮೊಟ್ಟೆ ಸಾಗಾಟದ ವಾಹನಕ್ಕೆ ಬಸ್ ಡಿಕ್ಕಿ, ರಸ್ತೆಯಲ್ಲೇ ಆಮ್ಲೇಟ್ !
28/10/2022, 18:11

ಮಂಗಳೂರು(reporterkarnataka.com): ನಗರದ ವೆಲೆನ್ಸಿಯಾದಲ್ಲಿ ಖಾಸಗಿ ಬಸ್ಸೊಂದರ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ನಿಲ್ಲಿಸಿದ್ದ ಮೊಟ್ಟೆ ಸಾಗಾಟದ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ಸಾವಿರಾರು ಮೊಟ್ಟೆಗಳು ಚಲ್ಲಾಪಿಲ್ಲಿಯಾದ ಘಟನೆ ಶುಕ್ರವಾರ ನಡೆದಿದೆ.
ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಮೊಟ್ಟೆ ಸಾಗಾಟದ ವಾಹನ ಸುಮಾರು 15 ಅಡಿಗಳಷ್ಟು ದೂರ ತಳ್ಳಲ್ಪಟ್ಟಿದೆ. ಮಂಗಳಾದೇವಿ ಕಡೆಯಿಂದ ಬರುತ್ತಿದ್ದ ಎರಡು ಖಾಸಗಿ ಬಸ್ ಗಳು ಒಟ್ಟೋಟ್ಟಿಗೆ ಬಂದಿದ್ದು, ವೆಲೆನ್ಸಿಯಾದ ಸರ್ಕಲ್ ಬಳಿ ತಲುಪಿದಾಗ ಸಿಟಿ ಬಸ್ ಓವರ್ ಟೇಕ್ ಮಾಡಲು ಮುಂದಾಗಿದ್ದು, ಈ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿಯಲ್ಲಿ ನಿಲ್ಲಿಸಿ ಅಂಗಡಿಗೆ ಮೊಟ್ಟೆ ಪೂರೈಕೆ ಮಾಡುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ.