ಇತ್ತೀಚಿನ ಸುದ್ದಿ
ಪಟಾಕಿ ಎಚ್ಚರವಿರಲಿ: ಮೂಡಿಗೆರೆಯಲ್ಲಿ ಮೈದಾನದಿಂದ ಹಾರಿಸಿ ರಾಕೆಟ್; ಸಮೀಪದ ಮನೆ ಬೆಂಕಿಗಾಹುತಿ
27/10/2022, 15:25

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.ಕಾಂ
ಪಟಾಕಿಯಿಂದ ಸಿಡಿದ ಕಿಡಿ ತಗುಲಿ ಮನೆಯೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ನಡೆದಿದೆ.
ರಾತ್ರಿ ಸಮಯದಲ್ಲಿ ಛತ್ರ ಮೈದಾನದಲ್ಲಿ ಪಟಾಕಿ ಸಿಡಿಸುತ್ತಿದ್ದ ವೇಳೆ ಹಾರಿದ ರಾಕೆಟ್ ವೊಂದು ಮನೆಯೊಂದರ ಮಹಡಿಯಲ್ಲಿ ಒಣ ಹಾಕಿದ್ದ ಬಟ್ಟೆಗೆ ತಗುಲಿದ್ದು ಬಟ್ಟೆಗೆ ಬೆಂಕಿ ಹಿಡಿದುಕೊಂಡು ಆ ಬೆಂಕಿ ಇಡಿ ಮನೆಗೆ ಆವರಿಸಿದೆ. ಕೂಡಲೇ ಸ್ಥಳೀಯರು ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಮನೆಯಲ್ಲಿ ಆ ಸಮಯದಲ್ಲಿ ಯಾರು ಇಲ್ಲದೆ ಇರುವುದರಿಂದ ಪ್ರಾಣಾಪಾಯ ಆಗುವುದು ತಪ್ಪಿದಂತಾಗಿದೆ.