ಇತ್ತೀಚಿನ ಸುದ್ದಿ
ಬಳ್ಳಾಲ್ ಬಾಗ್: ಶೋ ರೂಮಿಗೆ ನುಗ್ಗಿದ ಸಿಟಿ ಬಸ್; ಅತೀ ವೇಗ, ಅಜಾಗರೂಕತೆಯಿಂದ ಅವಘಡ
25/10/2022, 17:42
ಮಂಗಳೂರು(reporterkarnataka.com):ನಗರದ ಎಂ.ಜಿ. ರೋಡ್ ನ ಬಳ್ಳಾಲ್ ಭಾಗ್ ಸರ್ಕಲ್ ಬಳಿ ಸಿಟಿ ಬಸ್ಸೊಂದು ಶೋ ರೂಂಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.







ಸೋಮವಾರ ಬೆಳಗ್ಗೆ ಸುಮಾರು 8.30ರ ವೇಳೆಗೆ ಬಲ್ಲಾಳ್ ಬಾಗ್ ಸರ್ಕಲ್ ಹತ್ತಿರ ಪಿವಿಎಸ್ ಕಡೆಯಿಂದ ಸುರತ್ಕಲ್ ಕಡೆಗೆ ಸಾಗುತ್ತಿದ್ದ 45H ನಂಬರಿನ ಸಿಟಿ ಬಸ್ ಲಿಟಲ್ ಲೀಫ್ ಶೋ ರೂಂಗೆ ನುಗ್ಗಿದೆ. ಬಸ್ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವರದಿ ತಿಳಿಸಿದೆ.
ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














