ಇತ್ತೀಚಿನ ಸುದ್ದಿ
ವಿಜ್ಞಾನ ಮೇಳದ ಪೆಂಡಾಲ್ ಕುಸಿತ: ವಿದ್ಯಾರ್ಥಿಗಳು ಸಹಿತ 20ಕ್ಕೂ ಅಧಿಕ ಮಂದಿಗೆ ಗಾಯ
23/10/2022, 12:26
ಕಾಸರಗೋಡು(reporterkarnataka.com): ಜಿಲ್ಲೆಯ ಮಂಜೇಶ್ವರ ತಾಲೂಕಿನ ಬೇಕೂರು ಸರಕಾರಿ ಶಾಲೆ ಆವರಣದಲ್ಲಿ ವಿಜ್ಞಾನ ಮೇಳಕ್ಕೆ ಹಾಕಲಾದ ಪೆಂಡಾಲ್ ಸಂಪೂರ್ಣ ಕುಸಿದು ಬಿದ್ದು ಶಿಕ್ಷಕರು ಸಹಿತ 20ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜ್ಞಾನ ಮೇಳಕ್ಕೆ ಶಾಲಾ ಆವರಣದಲ್ಲಿ ತಗಡು ಶೀಟು ಹಾಕಿ ಪೆಂಡಾಲ್ ನಿರ್ಮಿಸಲಾಗಿತ್ತು. ಆ ಪೆಂಡಾಲ್ ಕುಸಿದು ಬಿದ್ದಿದೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಯಗೊಂಡಿದ್ದಾರೆ. ವಿಜ್ಞಾನ ಮೇಳಕ್ಕೆ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದ್ದರು.














