11:00 AM Friday7 - August 2026
ಬ್ರೇಕಿಂಗ್ ನ್ಯೂಸ್
ರಾಜೀನಾಮೆ ವಾಪಸ್ ಪಡೆದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್: ಸಚಿವ ಲಕ್ಷ್ಮಣ ಸವದಿ… ರಾಜ್ಯ ಸಂಪುಟ ವಿಸ್ತರಣೆ | ಅಪ್ಪ ಸಿದ್ದರಾಮಯ್ಯರ ಪಾತ್ರ ಬಿಚ್ಚಿಟ್ಟ ಪುತ್ರ ಯತೀಂದ್ರ;… ಚಂದ್ರನಿಗೆ ಅಪ್ಪಳಿಸಿದ ಇಲಾನ್ ಮಸ್ಕ್ ಸ್ಪೇಸ್‌ ಎಕ್ಸ್‌ನ ರಾಕೆಟ್‌: 100 ಅಡಿ ಕುಳಿ… 2029ರಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮಾಡುವುದೇ ನಮ್ಮ ಗುರಿ: ಕೊಡಗು ಜಿಲ್ಲಾ ಉಸ್ತುವಾರಿ… ಮಹಾಮಳೆಗೆ ಕೇರಳ ತತ್ತರ; ಬಹುತೇಕ ಪ್ರದೇಶ ಮುಳುಗಡೆ; ಅಪಾಯ ಮಟ್ಟ ಮೀರಿ ಹರಿಯುತ್ತಿರುವ… *ಬಿರುಗಾಳಿಗೆ ಸಿಲುಕಿ ಆಗಸದಲ್ಲೇ 300 ಅಡಿ ಕೆಳಗೆ ಕುಸಿದ ಏರ್ ಇಂಡಿಯಾ ವಿಮಾನ:… *10 ಲಕ್ಷ ರೂ. ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಹುಣಸೂರು ಉಪವಿಭಾಗಾಧಿಕಾರಿ… ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ಸಂಪುಟ ವಿಸ್ತರಣೆ | ಕೊನೆ ಕ್ಷಣದಲ್ಲಿ 3 ಬಾರಿ ಪಟ್ಟಿ ಬದಲು: ಗಾಯತ್ರಿ… ಸಂಪುಟ ವಿಸ್ತರಣೆ | ಈ ಬಾರಿಯೂ ಕೊಡಗಿಗೆ ಒಲಿಯದ ಮಂತ್ರಿಗಿರಿ: ವಿರಾಜಪೇಟೆ ಶಾಸಕ…

ಇತ್ತೀಚಿನ ಸುದ್ದಿ

ರೋಟರಿ ಕ್ಲಬ್ ಮಂಗಳೂರು ಪೂರ್ವ: ‘ಬಲೇ ಗೊಬ್ಬುಗ -2022’ ಕ್ರೀಡಾಕೂಟ; ವಾಟರ್ ಪ್ಯೂರಿಫೈರ್ ಕೊಡುಗೆ

20/10/2022, 17:30

ಮಂಗಳೂರು(reporterkarnataka.com): ರೋಟರಿ ಕ್ಲಬ್ ಮಂಗಳೂರು ಪೂರ್ವ ಇದರ ಆಶ್ರಯದಲ್ಲಿ ಆರ್.ಐ ಜಿಲ್ಲೆ ೩೧೮೧ ವಲಯ -೨ ಮತ್ತು ೩ರ “ಬಲೇ ಗೊಬ್ಬುಗ -೨೦೨೨”, ಕ್ರೀಡಾಕೂಟ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು.

ಪಿಡಿಜಿ ಎಂ ರಂಗನಾಥ್ ಭಟ್ ಕ್ರೀಡಾಕೂಟ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ.ಆರ್ ಶಿವಪ್ರಸಾದ್ ಆಳ್ವ (ಕೋಟಕ್ ಮಹೀಂದ್ರ ಇದರ ಚಾನಲ್ ಪಾರ್ಟ್ನರ್) ಶುಭ ಕೋರಿದರು.
ಜೋನ್-೨ರ ಎ.ಜಿ ಗಳಾದ ರಾಜಗೋಪಾಲ್ ರೈ ಹಾಗೂ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಂಗಳಾ ಕ್ರೀಡಾಂಗಣಕ್ಕೆ ವಾಟರ್ ಪ್ಯೂರಿಫೈರನ್ನು ದೇಣಿಗೆಯಾಗಿ ರೋಟರಿ ಕ್ಲಬ್ ಆಫ್ ಮಂಗಳೂರು ಪೂರ್ವದ ವತಿಯಿಂದ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿಜಿ ಎನ್ ವಿಕ್ರಮದತ್ತ ಹಾಗೂ ಪಿ.ಎ.ಜಿ. ಡಾ. ಶಿವಪ್ರಸಾದ್ ಕೆ. ಹಾಗೂ ವಲಯ ೨ಮತ್ತು ೩ರ ಎಸಿಗಳಾದ ಶಶಿಧರ್ ಕೆ. ಮತ್ತು ಸೂರಜ್ ಹೆಬ್ಬಾರ್ ನೆರಿಯಾ ಉಪಸ್ಥಿತರಿದ್ದರು.

ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷರಾದ ಅಂ ಹರೀಶ್ ಶೆಟ್ಟಿ ಸ್ವಾಗತಿಸಿದರು. ಕ್ರೀಡೆಯ ಉದ್ದೇಶವನ್ನು ಇವೆಂಟ್ ಚೇರ್‌ಮೆನ್ ರೋ. ಆನಂದ ಶೆಟ್ಟಿ ತಿಳಿಸಿದರು. ಪ್ರಮಾಣ ವಚನವನ್ನು ಇವೆಂಟ್ ಕಾರ್ಯದರ್ಶಿ ದೀರಜ್ ಶೆಟ್ಟಿ ಯವರು ಭೋದಿಸಿದರು. ಅಧ್ಯಕ್ಷ ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಝೋ-೨ರ ತಂಡ ಪ್ರಶಸ್ತಿಯನ್ನು ಆರ್. ಸಿ ಮಂಗಳೂರು ಪೂರ್ವ ಪಡೆದಿದ್ದು ರನ್ನರ್ ಪ್ರಶಸ್ತಿಯನ್ನು ಆರ್.ಸಿ ಬೈಕಂಪಾಡಿ ತಂಡವು ಗಳಿಸಿರುತ್ತದೆ.

ಝೋನ್-೩ರ ತಂಡ ಪ್ರಶಸ್ತಿಯನ್ನು ಆರ್. ಸಿ ಸೌತ್ ಮಂಗಳೂರು ತಂಡವು ರನ್ನರ್ ಆಗಿ ಆರ್. ಸಿ ದೇರಳಕಟ್ಟೆ ತಂಡವು ಗಳಿಸಿಕೊಂಡಿತು.
ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಬ್ಯಾಂಡ್‌ನೊAದಿಗೆ ಪಥ ಸಂಚಲನಕ್ಕೆ ವಿಶೇಷ ಮೆರುಗನ್ನು ನೀಡಿದರು

ಇತ್ತೀಚಿನ ಸುದ್ದಿ

ಜಾಹೀರಾತು