ಇತ್ತೀಚಿನ ಸುದ್ದಿ
ಸುರತ್ಕಲ್ ಟೋಲ್ ಗೇಟ್ ತೆರವು: ಕೇಸ್ ಹಾಕದೆ ಪ್ರತಿಭಟನಾಕಾರರ ಬಿಡುಗಡೆ; ಶೀಘ್ರದಲ್ಲೇ ಉಪವಾಸ ಸತ್ಯಾಗ್ರಹ?
18/10/2022, 22:53

ಸುರತ್ಕಲ್(reporterKarnataka.com): ಸುರತ್ಕಲ್ ನ ಅನಧಿಕೃತ ಟೋಲ್ ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾದ ಪ್ರತಿಭಟನಾಕಾರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೆ, ಬಾಂಡ್ ಬರೆಸದೆ ಬಿಡುಗಡೆಗೊಳಿಸಲಾಗಿದೆ.
ಬಂಧನಕ್ಕೊಳಗಾದ ಹೋರಾಟಗಾರರನ್ನು ಮೊದಲಿಗೆ ಪಾಂಡೇಶ್ವರ ಠಾಣೆಗೆ ಕರೆದುಕೊಂಡು ಹೋಗಲಾಯಿತು. ನಂತರ ಅವರನ್ನು ಸುರತ್ಕಲ್ ನ ಬಂಟರ ಭವನದಲ್ಲಿ ಬಂಧಿಸಿ ಇಡಲಾಯಿತು. ಪ್ರತಿಭಟನಾಕಾರರು ತಮ್ಮನ್ನು ಬಂಧಿಸಿ ಜೈಲಿಗೆ ಹಾಕಿ ಎಂದು ಹೇಳಿದರೂ ಯಾವುದೇ ಕೇಸು ದಾಖಲಿಸದೇ, ಬಾಂಡ್ ತೆಗೆದುಕೊಳ್ಳದೆ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಬಂಟರ ಭವನ ಹಾಲ್ ನಲ್ಲಿ ಹೋರಾಟಗಾರರು ಸಭೆ ಸೇರಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಿದರು.
ಶೀಘ್ರದಲ್ಲೇ ಉಪವಾಸ ಹೋರಾಟ ನಡೆಸಬೇಕಾಗಿ ಅಭಿಪ್ರಾಯ ವ್ಯಕ್ತವಾಯಿತು.
ನಾಳೆ ಹೋರಾಟ ಸಮಿತಿಯ ಸಭೆ ಕರೆದು ಮುಂದಿನ ಹೋರಾಟದ ದಿನಾಂಕ ಪ್ರಕಟಿಸುವುದಾಗಿ ನಿರ್ಣಯಿಸಲಾಯಿತು.