ಇತ್ತೀಚಿನ ಸುದ್ದಿ
ದೂಪದಕಟ್ಟೆಯಲ್ಲಿ ಬೈಕ್ – ಕಾರು ನಡುವೆ ಅಪಘಾತ: ಇಬ್ಬರಿಗೆ ಗಾಯ
16/10/2022, 10:23
ಕಾರ್ಕಳ(reporterkarnataka.com):
ಬೈಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರು ಗಾಯಗೊಂಡ ಘಟನೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ದೂಪದಕಟ್ಟೆ ಬಳಿ ನಡೆದಿದೆ.
ಬೈಕ್ ಸವಾರ ಎ.ಕೆ. ಸಮ್ಹಾಜ್ ಸಹ ಸವಾರನೊಂದಿಗೆ ಬೈಕ್ ನಲ್ಲಿ ದೂಪದಕಟ್ಟೆ ಕಡೆಯಿಂದ ಅತ್ತೂರು ಚರ್ಚ್ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಬೈಕ್ ನ ಸಹಸವಾರ ಸಮೇತ ಗಾಯಗೊಂಡಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














