ಇತ್ತೀಚಿನ ಸುದ್ದಿ
ಉತ್ತರಾಖಂಡ: ಕುಖ್ಯಾತ ಕ್ರಿಮಿನಲ್ ಗೆ ಹಾರಿಸಿದ ಪೊಲೀಸರ ಗುಂಡಿಗೆ ಬಿಜೆಪಿ ನಾಯಕನ ಪತ್ನಿ ಬಲಿ
14/10/2022, 22:16
ಡೆಹ್ರಾಡೂನ್(reporter Karnataka.com): ಪೊಲೀಸರು ಗುರುವಾರ ಸಂಜೆ ವಾಂಟೆಡ್ ಕ್ರಿಮಿನಲ್ ಅನ್ನು ಬೆನ್ನಟ್ಟುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಬಿಜೆಪಿ ನಾಯಕನ ಪತ್ನಿ ಸಾವನ್ನಪ್ಪಿದ ಘಟನೆ ನಡೆದಿದ್ದು, ಪೊಲೀಸರ ಮೇಲೆ ಕೊಲೆ ಆರೋಪ ಹಾಕಲಾಗಿದೆ. ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಗಳ ತಂಡ ನೆರೆಯ ಉತ್ತರಾಖಂಡದಲ್ಲಿ ಕೊಲೆ ಆರೋಪ ಎದುರಿಸುತ್ತಿದ್ದಾರೆ.
ಸ್ಥಳೀಯ ಬಿಜೆಪಿ ನಾಯಕ ಗುರ್ತಾಜ್ ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್ (28) ಪೊಲೀಸರ ಗುಂಡಿನ ಚಕಮಕಿಗೆ ಬಲಿಯಾದ ಮಹಿಳೆ. ಈ ಘಟನೆಯಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‌ನ ಐವರು ಪೊಲೀಸರು ಗಾಯಗೊಂಡಿದ್ದಾರೆ. ಬಿಜೆಪಿ ಆಡಳಿತವಿರುವ ಎರಡು ರಾಜ್ಯಗಳ ಪೊಲೀಸರ ನಡುವೆ ಇದೀಗ ಕಾಳಗ ಏರ್ಪಟ್ಟಿದೆ.ಉತ್ತರಾಖಂಡದ ಜಸ್‌ಪುರದ ಗ್ರಾಮವೊಂದಕ್ಕೆ ಬುಧವಾರ ಉತ್ತರಾಖಂಡದ ಜಸ್‌ಪುರದ ಗ್ರಾಮವೊಂದಕ್ಕೆ ತೆರಳಿದ್ದ ಉತ್ತರಾಖಂಡದ ಪೊಲೀಸ್ ತಂಡ, ಮೈನಿಂಗ್ ಮಾಫಿಯಾದ ಜಾಫರ್ ಎಂಬ ಕ್ರಿಮಿನಲ್‌ನನ್ನು ಹಿಡಿಯಲು ತೆರಳಿದ್ದು, ಆತನ ತಲೆಗೆ ₹ 50,000 ಬಹುಮಾನ ಘೋಷಿಸಲಾಗಿತ್ತು.














