4:49 AM Friday8 - May 2026
ಬ್ರೇಕಿಂಗ್ ನ್ಯೂಸ್
ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ ಧಾರವಾಡದಲ್ಲಿ ಬೌದ್ಧ ಸನ್ಯಾಸಿ ಕೊಲೆ ಪ್ರಕರಣ: ಮಹಾರಾಷ್ಟ್ರದಲ್ಲಿ 3 ಮಂದಿ ಆರೋಪಿಗಳ ಅರೆಸ್ಟ್ ಸಿದ್ದಾಪುರ: ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿ ದಾರುಣ ಸಾವು

ಇತ್ತೀಚಿನ ಸುದ್ದಿ

ಸುರತ್ಕಲ್ ಟೋಲ್ ಗೇಟ್ ಬಿಜೆಪಿ ಆಡಳಿತದ ಜನದ್ರೋಹವನ್ನು ಬಯಲಿಗೆಳೆದಿದೆ: ಮುನೀರ್ ಕಾಟಿಪಳ್ಳ

14/10/2022, 10:57

ಮಂಗಳೂರು(reporterkarnataka.com): ಸುರತ್ಕಲ್ ಅಕ್ರಮ ಟೋಲ್ ಗೇಟ್ ಇಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಸ್ತದ ಜ‌ನಸಮೂಹದ ಹೋರಾಟವಾಗಿ ಪರಿವರ್ತನೆಗೊಂಡಿದೆ. ಟೋಲ್ ಗೇಟ್ ತೆರವಿನ ನಿರ್ಧಾರದ ಹೊರತಾಗಿಯೂ ಟೋಲ್ ಸಂಗ್ರಹ ಮುಂದುವರಿದಿರುವು ಬಿಜೆಪಿ ಸಂಸದ, ಶಾಸಕರು ನವಯುಗ್ ನಂತಹ ಬಂಡವಾಳಶಾಹಿಗಳ ಹಿತಾಸಕ್ತಿಗಳ ಪರವಾಗಿ ಕೆಲಸ ಮಾಡುತ್ತಿರುವುದರ ಫಲ. ಒಟ್ಟಾರೆ ಬಿಜೆಪಿ ಆಡಳಿತದ ಜನದ್ರೋಹತನವ‌ನ್ನು ಸುರತ್ಕಲ್ ಟೋಲ್ ಸುಲಿಗೆ ಬಹಿರಂಗಗೊಳಿಸಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದರು‌‌.


ಅವರು ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೇಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಅಕ್ಟೋಬರ್ 18ರ ಟೋಲ್ ಗೇಟ್ ಮುತ್ತಿಗೆ ಬೆಂಬಲಿಸಿ ನಡೆಸಿದ ಮೆರವಣಿಗೆಯ‌ನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಎರಡನ್ನೂ ಮಾರಾಟಕ್ಕಿಟ್ಟಿರುವ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸದ, ಟೋಲ್ ಮಾಫಿಯಾಗಳ ರಕ್ಷಣೆಗೆ ನಿಲ್ಲುವ ಬಿಜೆಪಿ ಸರಕಾರ ಇಲ್ಲಿನ ಶಾಸಕರುಗಳು ಶ್ರಮಜೀವಿ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತಾರೆ. ಜನತೆ ಇಂತಹ ಪಿತೂರಿಗಳಿಗೆ ಬಲಿಯಾಗದೆ ಜನಪರ ಹೋರಾಟಗಳನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು.


ಸ್ಥಳೀಯ ನಗರಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಕಂದಕ್, ಬಂದರು ಶ್ರಮಿಕರ ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್,ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಜ್ ಮಾತನಾಡಿದರು.ಡಿವೈಎಫ್ಐ ಮುಖಂಡ ರಫೀಕ್ ಹರೇಕಳ, ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಹರೇಕಳ ಶ್ರಮಿಕರ ಸಂಘದ ಮುಖಂಡರಾದ ಫಾರುಕ್ ಉಳ್ಳಾಲ, ಮಜೀದ್ ಯು. ಬಿ, ಮಾಧವ ಕಾವೂರ್, ಸಿದ್ದಿಕ್ ಬೆಂಗರೆ, ಪಿ.ಟಿ ಮೊಹಮ್ಮದ್, ಪುತ್ತುಂಜಿ ಮಂಜನಾಡಿ, ಟೆಂಪೋ ಚಾಲಕರ ಸಂಘದ ಪ್ರಮುಖರಾದ ದೇವದಾಸ್, ಮಕ್ಬೂಲ್ ಒಣ ಮೀನು ಕಾರ್ಮಿಕರ ವಿಭಾಗದ ಮೊಹಮ್ಮದ್ ಮೋನು, ರಫೀಕ್ ನಂದಾವರ, ಮಯ್ಯದ್ದಿ ಬೆಂಗರೆ, ಹಕೀಮ್ ಬೆಂಗರೆ, ರಫೀಕ್ ಬೆಂಗ್ರೆ ಉಪಸ್ಥಿತರಿದ್ದರು ಹರೀಶ್ ಕೆರೆಬೈಲ್ ಸ್ವಾಗತಿಸಿ, ವಂದಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು