ಇತ್ತೀಚಿನ ಸುದ್ದಿ
ಮಂಗಳೂರು: ಸಾವಿಗೆ ಶರಣಾದ ರಾಷ್ಟ್ರೀಕೃತ ಬ್ಯಾಂಕಿನ ಲೇಡಿ ಮೆನೇಜರ್ ; ಹಿರಿಯ ಅಧಿಕಾರಿಗಳ ಕಿರುಕುಳ ಕಾರಣವೇ?
13/10/2022, 15:53
ಮಂಗಳೂರು(reporterkarnataka.com) : ರಾಷ್ಟ್ರೀಕೃತ ಬ್ಯಾಂಕ್ ವೊಂದರ ಮಹಿಳಾ ಮೆನೇಜರ್
ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಯೆಯ್ಯಾಡಿಯಲ್ಲಿ ನಡೆದಿದೆ.
ಸಾವಿಗೆ ಶರಣಾದ ಬ್ಯಾಂಕ್ ಮೆನೇಜರ್ ಅವರನ್ನು ಪದ್ಮಾವತಿ(52) ಎಂದು ಗುರುತಿಸಲಾಗಿದೆ. ಇವರು ಬ್ಯಾಂಕಿನ ಬಿಜೈ ಶಾಖೆಯಲ್ಲಿ ವ್ಯವಸ್ಥಾಪಕಿಯಾಗಿದ್ದರು ಎಂದು ತಿಳಿದು ಬಂದಿದೆ.
ತಾನೂ ಇತ್ತೀಚೆಗಷ್ಟೇ ನಗರದ ಯೆಯ್ಯಾಡಿ ಬಳಿ ಖರೀದಿಸಿದ ಹೊಸ ಫ್ಲಾಟಿನಲ್ಲಿ ಪದ್ಮಾವತಿ ಅವರು ನೇಣಿಗೆ ಶರಣಾಗಿದ್ದಾರೆ. ಪದ್ಮಾವತಿ MIT ಯಲ್ಲಿ ವ್ಯಾಸಂಗ ಮಾಡುತ್ತಿರುವ ಓರ್ವ ಮಗ ಹಾಗೂ ಪತಿಯನ್ನು ಅಗಲಿದ್ದಾರೆ.
ಬ್ಯಾಂಕಿನ ಹಿರಿ ಅಧಿಕಾರಿಗಳ ಕಿರುಕುಳವೇ ಪದ್ಮಾವತಿ ಸಾವಿಗೆ ಕಾರಣ ಎಂಬ ಮಾತುಗಳು ಆಕೆಯ ಆಪ್ತ ವಲಯದಲ್ಲಿ ಕೇಳಿ ಬರುತ್ತಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯೆಯ್ಯಾಡಿಯಲ್ಲಿ ಇತ್ತೀಚೆಗಷ್ಟೇ ಹೊಸ ಫ್ಲ್ಯಾಟ್ ಖರೀದಿಸಿದ ಪದ್ಮಾವತಿ ಕೀಗಳನ್ನು ಗಂಡನ ಬಳಿ ಕಳಿಸಿಕೊಟ್ಟಿದ್ದರು ಮತ್ತು ನೈಲನ್ ದಾರದ ಬಗ್ಗೆ ವಿಚಾರಿಸಿದ್ದರು.
ಆಕೆಯ ತಂಗಿ ನಿನ್ನೆ ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣ ಪರಿಶೀಲನೆ ಮಾಡಿದಾಗ ಆಕೆ ನೂತನವಾಗಿ ಖರೀದಿಸಿದ ಫ್ಲಾಟಿನ ಫ್ಯಾನಿಗೆ ಆಗಲೇ ಕೊರಳೊಡ್ಡಿಯಾಗಿತ್ತು ಎನ್ನಲಾಗಿದೆ.
ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆದಿದೆ.














