ಇತ್ತೀಚಿನ ಸುದ್ದಿ
ಕಂಬಳ ಕ್ಷೇತ್ರದ ಮಹಾನ್ ಸಾಧಕ ಇರುವೈಲು ಪಾಣಿಲ ಬಾಡ ಪೂಜಾರಿ ಇನ್ನಿಲ್ಲ
11/10/2022, 09:46
ಮಂಗಳೂರು(reporterkarnataka.com): ಕಂಬಳ ಕ್ಷೇತ್ರದ ಮಹಾನ್ ಸಾಧಕ ಇರುವೈಲು ಪಾಣಿಲ ಬಾಡ ಪೂಜಾರಿ ವಯೋಸಹಜ ಕಾಯಿಲೆ ಯಿಂದ ನಿಧನರಾಗಿದ್ದಾರೆ .

ಕಂಬಳ ಕ್ಷೇತ್ರದಲ್ಲಿ ಇವರ ಯಜಮಾನ ನೇತೃತ್ವದಲ್ಲಿ ಕೋಣಗಳು ವಿಶೇಷ ಸಾಧನೆ ಮಾಡಿದ್ದರು. ಇವರ ಯಜಾಮಾನಿಕೆಯಲ್ಲಿ ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಅಶ್ವಥಪುರ ಶ್ರೀನಿವಾಸ ಗೌಡ ಕಂಬಳದಲ್ಲಿ ವಿಶ್ವದಾಖಲೆ ಮಾಡಿದ್ದರು. ಇವರ ಕೋಣಗಳು ಅನೇಕ ಪದಕಗಳನ್ನು ಹಾಗೂ ದಾಖಲೆಗಳನ್ನು ನಿರ್ಮಿಸಿದ್ದವು














