ಇತ್ತೀಚಿನ ಸುದ್ದಿ
ಮಂಗಳೂರು: ಕೊಡಗು ಪ್ರವಾಸದಿಂದ ಹಿಂತಿರುಗಿದ ದಂಪತಿ ನೇಣಿಗೆ ಶರಣು; ಕಾರಣ ಇನ್ನೂ ನಿಗೂಢ
10/10/2022, 14:53
ಮಂಗಳೂರು(reporterkarnataka.com): ಕೊಡಗು ಪ್ರವಾಸದಿಂದ ಹಿಂತಿರುಗಿದ ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಂಕನಾಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಲ್ಲಿಕಾರ್ಜುನ್ (35) ಹಾಗೂ ಸೌಮ್ಯ (34) ದಡದ ಅವರು 2 ದಿನಗಳ ಪ್ರವಾಸಕ್ಕೆಂದು ಕೊಡಗು ಜಿಲ್ಲೆಗೆ ತೆರಳಿದ್ದರು. ನಂತರ ಹಿಂತಿರುಗಿದ ಅವರು ಮನೆಯವರಿಗೆ ತಿಳಿಸಿ ನೇಣಿಗೆ ಶರಣಾಗಿದ್ದಾರೆ.


ಮನೋಜ್ ಮೂಲತ: ಹುಬ್ಬಳ್ಳಿಯವರಾಗಿದ್ದು,ಫ್ರೀಲಾನ್ಸ್ ವೆಬ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳೂರಿನವರೇ ಆಗಿರುವ ಸೌಮ್ಯ ಐಟಿಐ ಕಾಲೇಜು ಉಪನ್ಯಾಸಕಿ ಆಗಿದ್ದರು.
ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮನೆಯವರು ಬರುವಷ್ಟರಲ್ಲಿ ದುರ್ಘಟನೆ ನಡೆದೇ ಹೋಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.














