ಇತ್ತೀಚಿನ ಸುದ್ದಿ
ಬ್ಯಾರಿ ಅಕಾಡೆಮಿಯಿಂದ ‘ಬ್ಯಾರಿ ಭಾಷಾ ದಿನಾಚರಣೆ’: ‘ಬ್ಯಾರಿ ವಚನಮಾಲೆ’ ಕೃತಿ ಬಿಡುಗಡೆ
04/10/2022, 00:31
ಮಂಗಳೂರು(reporter Karnataka.com): ಎಲ್ಲ ಭಾಷೆ ಜೊತೆಗೆ ಇರುವ ಸಾಮರಸ್ಯ ನಮ್ಮದು. ಕರಾವಳಿ ತುಳು, ಬ್ಯಾರಿ, ಕೊಂಕಣಿ ಭಾಷೆಯ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಹೀಗಾಗಿ ಸಹಬಾಳ್ವೆ, ಸಹೋದರತೆ ಮುಖ್ಯ ಆಗುತ್ತದೆ ಎಂದು ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದರು.
ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ “ಬ್ಯಾರಿ ಭಾಷಾ ದಿನಾಚರಣೆ ಹಾಗೂ ಬ್ಯಾರಿ ವಚನಮಾಲೆ ಪುಸ್ತಕ ಬಿಡುಗಡೆ” ಸಮಾರಂಭವನ್ನು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸ.ಪ.ಪೂ, ಕಾಲೇಜು ಬಿ,ಮೂಡ ಬಂಟ್ವಾಳ ಇಲ್ಲಿನ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಇವರು ಬ್ಯಾರಿ ಭಾಷಾ ದಿನಾಚರಣೆಯ ಉಪನ್ಯಾಸ ನೀಡಿದ್ರು. ಮಾತೃಭಾಷೆಗೆ ದೇಶ ಅಲ್ಲ, ವಿದೇಶಗಳಲ್ಲೂ ಪ್ರಾಮುಖ್ಯತೆ ಇದೆ ಅಂದ್ರು.
ಲೇಖಕ ಹಾಗೂ ಸ್ನೇಹ ಪಬ್ಲಿಕ್ ಸ್ಕೂಲ್ ಬಜಾಲ್ ಇದರ ಶಿಕ್ಷಕ ಅಶೀರುದ್ದೀನ್ ಆಲಿಯಾ ಇವರು ಬರೆದ “ಬ್ಯಾರಿ ವಚನಮಾಲೆ” ಕೃತಿಯನ್ನು ಸಾಹಿತಿ ಹಾಗೂ ಪತ್ರಕರ್ತರಾದ ಹಂಝ ಮಲಾರ್ ಇವರು ಬಿಡುಗಡೆ ಮಾಡಿ ಕೃತಿ ಪರಿಚಯ ಮಾಡಿದ್ರು. ವೇದಿಕೆಯಲ್ಲಿ ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಉಪಸ್ಥಿತರಿದ್ದು ಸ್ವಾಗತಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯ ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು. ಬ್ಯಾರಿ ಅಕಾಡೆಮಿ ಸದಸ್ಯೆ ಸುರೇಖಾ ವಂದಿಸಿದರು.