ಇತ್ತೀಚಿನ ಸುದ್ದಿ
ರಸ್ತೆ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನೆ; ಕ್ರೋಧಗೊಂಡ ಶಾಸಕರಿಂದ ಕಾರ್ಯಕರ್ತನ ಆರೆಸ್ಟ್ !
27/09/2022, 19:18

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಕುಡಚಿ ಕ್ಷೇತ್ರದ ರಸ್ತೆಯ ಕಳಪೆ ಕಾಮಗಾರಿ ಕುರಿತು ಪ್ರಶ್ನಿಸಿದ ಕಾರ್ಯಕರ್ತರೊಬ್ಬರನ್ನು ಕ್ಷೇತ್ರದ ಶಾಸಕ ಪಿ. ರಾಜೀವ್ ಅವರು ಪೊಲೀಸರಿಗೆ ಹೇಳಿ ಬಂಧಿಸಿದ ಘಟನೆ ನಡೆದಿದೆ.
ಪಿ. ರಾಜೀವ್ ಅವರನ್ನು ಕ್ಷೇತ್ರದ ರಸ್ತೆಯ ಕಳಪೆ ಕಾಮಗಾರಿಗಳ ಪ್ರಶ್ನೆಗೆ ಶಾಸಕ ಗರಂ.
ಭಾರತೀಯ ಜನತಾ ಪಕ್ಷ ಕುಡಚಿ ಮಂಡಲ ವತಿಯಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಸೇವಾ ಪಾಕ್ಷಿಕ ಅಭಿಯಾನ ಕಾರ್ಯಕ್ರಮದಲ್ಲಿ ಕಾರ್ಯಕರ್ತರೊಬ್ಬರು ರಸ್ತೆಯ ಕಳಪೆ ಕಾಮಗಾರಿ ಬಗ್ಗೆ ಪ್ರಶ್ನಿಸಿದ್ದರು. ಇದರಿಂದ ಶಾಸಕ ಪಿ. ರಾಜೀವ್ ಅವರು ಗರಂ ಆಗಿದ್ದರು. ಪ್ರಶ್ನೆ ಮಾಡಿದ ತಪ್ಪಿಗೆ ಕಾರ್ಯಕರ್ತರನ್ನು ತಕ್ಷಣವೇ ಪೊಲೀಸರಿಗೆ ಹೇಳಿ ಶಾಸಕ ರಾಜೀವ್ ಅರೆಸ್ಟ್ ಮಾಡಿದಸಿದರು.
ಕಾರ್ಯಕರ್ತರ ಮೇಲೆ ಕೇಸ್ ಮಾಡುವುದಾಗಿ ಅವಾಜ್ ಹಾಕಿದರು.