3:13 PM Thursday15 - May 2025
ಬ್ರೇಕಿಂಗ್ ನ್ಯೂಸ್
ಲೋಕಾಯುಕ್ತ ಅಧಿಕಾರಿಗಳಿಂದ ಮತ್ತೆ ಭ್ರಷ್ಟರ ಭೇಟೆ: ಬೆಂಗಳೂರು, ಮಂಗಳೂರು ಸಹಿತ 7 ನಗರಗಳ… ಮಂಗಳೂರು: ಸರ್ವೆ ಇಲಾಖೆಯ ಅಧಿಕಾರಿ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ;… Bangalore | ಗ್ರಾಹಕರ ದೂರು ನಿರ್ವಹಣೆಗೆ ಡಿಜಿಟಲ್ ಪೋರ್ಟಲ್: ಬೆಸ್ಕಾಂ ಎಂಡಿ ಡಾ.ಎನ್.… Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.…

ಇತ್ತೀಚಿನ ಸುದ್ದಿ

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ: ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ನೂತನ ಅಧ್ಯಕ್ಷ?

24/09/2022, 11:04

ಮಂಗಳೂರು(reporterkarnataka.com): ಕರಾವಳಿಯನ್ನು ಅವಲಂಬಿಸಿರುವ ರಾಜ್ಯದ ಮೂರು ಪ್ರಮುಖ ಅಕಾಡೆಮಿಗಳಿಗೆ ಶೀಘ್ರದಲ್ಲೇ ಹೊಸ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆಗೈದ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

ತುಳುನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿನಿಧಿಸಬಲ್ಲ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯನ್ನು ಮುನ್ನಡೆಸಲು ಯೋಗ್ಯ ಗುರಿಕಾರನ ತಲಾಶ್ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಹಲವರ ಹೆಸರು ಓಡಾಡುತ್ತಿದ್ದರೂ ಯಾವುದೇ ಪ್ರಚಾರಪ್ರಿಯತೆ ಇಲ್ಲದೆ, ಎಲೆಮರೆಯ ಕಾಯಿಯಂತೆ ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಹೆಸರು ಚಾಲ್ತಿಯಲ್ಲಿದೆ. 

ಪಮ್ಮಿ ಕೊಡಿಯಾಲ್ ಬೈಲ್ ಎಂದೇ ಜನಮಾನಸದಲ್ಲಿ ಮುದ್ರೆಯೊತ್ತಿರುವ ಪ್ರವೀಣ್ ಅವರು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಜನಪದ ಮುಂತಾದ ಕ್ಷೇತ್ರದಲ್ಲಿ ದುಡಿದ ಅನುಭವಿ. 

ಕೊರೊನಾ ಲಾಕ್ ಡೌನ್ ಕಷ್ಟಕಾಲವನ್ನು ನೆನಪಿಸಿಕೊಂಡಾಗ ನೆನಪಿಗೆ ಬರುವ ಕೆಲವು ಹೆಸರುಗಳಲ್ಲಿ ಪಮ್ಮಿ ಕೊಡಿಯಾಲ್ ಬೈಲ್ ಅವರದ್ದು ಪ್ರಮುಖವಾದದ್ದು. ಯಾವುದೇ ಪ್ರಚಾರ ಇಲ್ಲದೆ, ಯಾರಲ್ಲೂ ಕ್ಯಾಮೆರಾ ಹಿಡಿಸದೆ, ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ರಾಗಬಾರದು ಎನ್ನುವ ರೀತಿಯಲ್ಲಿ ಪಮ್ಮಿ ಅವರು ಲಾಕ್ ಡೌನ್ ಸಮಯದಲ್ಲಿ ಬಡವರಿಗೆ, ನಿರ್ಗತಿಕರಿಗೆ ಫುಡ್ ಕಿಟ್, ವಸ್ತ್ರ ಹಂಚಿದ್ದನ್ನು ಅವರಿಂದ ಪ್ರಯೋಜನ ಪಡೆದ ಫಲಾನುಭವಿಗಳು ತುಂಬಿದ ಕಂಗಳಿಂದ ನೆನಪಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಯಾರೇ ಪಮ್ಮಿ ಅವರನ್ನು ಸಂಪರ್ಕಿಸಿ ತಮ್ಮ ಕಷ್ಟ ನಿವೇದಿಸಿಕೊಂಡರೆ ಅವರು ಎಂದಿಗೂ ಅವರನ್ನು ಬರಿಗೈಯಲ್ಲಿ ಹಿಂತಿರುಗಿಸಿದವರಲ್ಲ. ಅಂತಹ ಮಿಡಿಯುವ ಮನ ಅವರನ್ನು ತುಂಬಾ ಎತ್ತರಕ್ಕೆ ತಂದು ನಿಲ್ಲಿಸಿದೆ ಎಂದರೆ ಅತಿಶಯೋಕ್ತಿ ಆಗಲಾರದು. 

ಪಮ್ಮಿ ಅವರು ಸೌಮ್ಯ ಸ್ವಭಾವದ ಸ್ನೇಹಜೀವಿ. ಒಂದು ರೀತಿಯಲ್ಲಿ ಅಜಾತಶತ್ರು.


ಯಾರೇ ಸಿಕ್ಕಿದರೂ ಶುದ್ಧ ತುಳುವಿನಲ್ಲಿ ಮಾತಿಗೆ ಇಳಿಯುತ್ತಾರೆ. ತುಳು ನೆಲ- ಜಲ- ಸಂಸ್ಕೃತಿಯ ಬಗ್ಗೆ ಅಪಾರ ಗೌರವ ಹಾಗೂ ಅನುಭವವನ್ನು ಅವರುಹೊಂದಿದ್ದಾರೆ. ರಾಜಕೀಯವಾಗಿ ಅವರು ಬಿಜೆಪಿ ಸ್ಲಂ ಮೋರ್ಚಾದ ಅಧ್ಯಕ್ಷರಾಗಿ ದುಡಿದಿದ್ದಾರೆ. ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಟಪಾಡಿ ಕಟ್ಟಪ್ಪ ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ಜುಗಾರಿ, ಬಲಿಪೆರೆ ಇಜ್ಜಿ ತುಳು ಸಿನಿಮಾದ ನಿರ್ಮಾಪಕರಾಗಿದ್ದಾರೆ. ದಿ ಬಾಸ್ ಕನ್ನಡ ಸಿನಿಮಾದ ಸಹ ನಿರ್ಮಾಪಕರು.

ಕರ್ನಾಟಕ ಜಾನಪದ ಪರಿಷತ್ ದ.ಕ.ಜಿಲ್ಲಾ ಘಟಕದ ಅಧ್ಯಕ್ಷರಾಗಿ ಮಂಗಳೂರಿನ ಪುರಭವನದಲ್ಲಿ ಜನಪದ ಜಾತ್ರೆಯನ್ನು ಯಶಸ್ವಿಯಾಗಿ ಸಂಘಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಜಾನಪದ ಪರಿಷತ್ ಅಧ್ಯಕ್ಷರ ನೆಲೆಯಲ್ಲಿ ಭೂತ ನರ್ತನ ಜನಾಂಗದ ಕಷ್ಟ ಹಾಗೂ ಸಮಸ್ಯೆ ಗಳ ಬಗ್ಗೆ ಅಧ್ಯಯನ ನಡೆಸಿ ಅದರ ಪರಿಹಾರಕ್ಕೆ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಯಕ್ಷಗಾನಕ್ಕೆ ಸಾಕಷ್ಟು ಪ್ರೋತ್ಸಾಹ ನೀಡಿದ್ದಾರೆ. ಉತ್ತಮ ಕಬಡ್ಡಿ ಆಟಗಾರರಾದ ಪಮ್ಮಿ ಅವರು ರಕ್ತದಾನಿಯೂ ಹೌದು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಪಮ್ಮಿ ಅವರ ತಂಡದ ಸುಮಾರು 170 ಮಂದಿ ರಕ್ತದಾನ ಮಾಡಿದ್ದಾರೆ. ಮುಂಬೈಯಲ್ಲಿ ನಡೆದ ಹೊರನಾಡು ಕನ್ನಡಿಗರ ಸಮ್ಮೇಳನದಲ್ಲಿ ಪಮ್ಮಿ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಅವರಿಗೆ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ತಕ್ಕದಾದ ಹೆಸರು ಎನ್ನುವುದು ತುಳುವರ ಅಭಿಪ್ರಾಯವಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು