ಇತ್ತೀಚಿನ ಸುದ್ದಿ
ಕೂಡ್ಲಿಗಿ: ಮಿನಿ ವಿಧಾನಸೌಧ ಉದ್ಘಾಟನೆ ಕಾರ್ಯಕ್ರಮ ಪೂರ್ವ ಸಭೆ; ಭಾರೀ ಸಿದ್ಧತೆ
21/09/2022, 13:15
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಕೂಡ್ಲಿಗಿಯಲ್ಲಿ ಮಿನಿ ವಿಧಾನಸೌಧ ಉದ್ಘಾಟನೆ ಕಾರ್ಯಕ್ರಮಕ್ಕೆ ಪೂರ್ವ ಸಭೆ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಸೆ. 26 ರಂದು ಪಟ್ಟಣದ ಮಿನಿ ವಿಧಾನಸೌಧ, ಪಪಂ ಕಚೇರಿ ಹಾಗೂ ಮಹಾದೇವ ಮೈಲಾರ ಕ್ರೀಡಾಂಗಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಸಚಿವರುಗಳಾದ ಆರ್.ಅಶೋಕ, ಸೋಮಣ್ಣ, ಬಿ.ಶ್ರೀರಾಮುಲು, ಎಂ.ಟಿ.ಬಿ.ನಾಗರಾಜ್, ಶಶಿಕಲಾ ಜೊಲ್ಲೆ ಹಾಗೂ ಆನಂದ್ ಸಿಂಗ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಕ್ಷೇತ್ರದ ಸಕ್ರೀಯ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಬೇಕು ಎಂದು ತಿಳಿಸಿದರು.
ಐತಿಹಾಸಿಕ ಕಾರ್ಯಕ್ರಮವನ್ನು ಆಯೋಜಿಸಲು ಇನ್ನೂ ಸ್ಥಳ ನಿಗದಿ ಬಗ್ಗೆ ಎಲ್ಲರೊಂದಿಗೆ ಚರ್ಚಿಸಿ ತಿಳಿಸಲಾಗುವುದು ಎಂದು ನುಡಿದರು.
ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದು ತಿಳಿಸಿದರು. ಅದಕ್ಕಾಗಿ ಸರ್ವ ರೀತಿಯ ತಯಾರಿಯನ್ನು ಮುಖಂಡರುಗಳು ಜವಾಬ್ದಾರಿ ತೆಗೆದುಕೊಂಡು ಎಲ್ಲಿಯೂ ಲೋಪವಾಗದಂತೆ ರೂಪು ರೇಖೆಗಳನ್ನು ಕೈಗೊಳ್ಳಬೇಕು ಎಂದು ಸಭೆಗೆ ತಿಳಿಸಿದರು. ಕಾರ್ಯಕ್ರಮಕ್ಕೆ ಕಂದಾಯ, ವಸತಿ, ಪೌರಾಡಳಿತ,ಸಾರಿಗೆ ಸಚಿವರು ಸೇರಿದಂತೆ ಇತರೆ ಸಚಿವ ಸಂಪುಟದ ಸಹೋದ್ಯೋಗಿಗಳು ಆಗಮಿಸುವ ಹಿನ್ನಲೆಯಲ್ಲಿ ಕ್ಷೇತ್ರದ ಇನ್ನೂಳಿದ ಅಭಿವೃದ್ಧಿಯ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ರೂಪುರೇಷೆಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಲು ಜಿಲ್ಲಾಧಿಕಾರಿ ಅನಿರುದ್ ಶ್ರವಣ್ ಆಗಮಿಸಿ ಮುಂದಿನ ಕಾರ್ಯಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಿದ್ದಾರೆ ಎಂದರು.ಈ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಕ್ಷಾತೀತವಾಗಿ ಎಲ್ಲ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಭೆಯಲ್ಲಿ ತಹಸೀಲ್ದರ್ ಟಿ.ಜಗದೀಶ್, ತಾಪಂ ಇಒ ರವಿಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ಚೆನ್ನಪ್ಪ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ, ಮುಖಂಡರಾದ ಕೆ.ಎಚ್.ವೀರನಗೌಡ,ಕೆ.ಎಂ.ತಿಪ್ಪೇಸ್ವಾಮಿ, ಟಿ.ಜಿ.ಮಲ್ಲಿಕಾರ್ಜುನ ಗೌಡ, ದೀನಾ ಮಂಜುನಾಥ, ಬಿ.ಭೀಮೇಶ್, ಕಾವಲಿ ಶಿವಪ್ಪನಾಯಕ, ಸಿರಬಿ ಮಂಜುನಾಥ, ಕೆ.ಈಶಪ್ಪ, ತಳಾಸ್ ವೆಂಕಟೇಶ, ಹೊಂಬಾಳೆ ರೇವಣ್ಣ,ಎಸ್.ಪಿ.ಪ್ರಕಾಶ್, ಬಿ.ಪಿ.ಚಂದ್ರಮೌಳಿ,ಎನ್.ಪಿ.ಮಂಜುನಾಥ ಸೇರಿದಂತೆ ಅನೇಕ ಮುಖಂಡರು ಇದ್ದರು.