ಇತ್ತೀಚಿನ ಸುದ್ದಿ
ಮಣಿಪಾಲ ಮಣ್ಣಪಳ್ಳದಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು
15/09/2022, 21:58
ಮಣಿಪಾಲ(reporterkarnataka.com):ಗಾಳ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವ ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮಣಿಪಾಲ ಮಣ್ಣಪಳ್ಳ ಕೆರೆಯಲ್ಲಿ ಇಂದು ನಡೆದಿದೆ.
ಮೃತರನ್ನು ಕುಂದಾಪುರ ನಿವಾಸಿ ಪ್ರಕಾಶ್(35) ಎಂದು ಗುರುತಿಸಲಾಗಿದೆ. ಗಾಳ ಹಾಕಿ ಮೀನು ಹಿಡಿಯುವ ಸಂದರ್ಭದಲ್ಲಿ ಆಯತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳದಲ್ಲಿ ಗಾಳದ ಪರಿಕರಗಳು ಲಭ್ಯವಾಗಿದೆ.
ಮಣಿಪಾಲ ಠಾಣಾಧಿಕಾರಿ ರಾಜಶೇಖರ ಹೊಂದಾಳೆ, ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ್ ಘಟನಾ ಸ್ಥಳದಲ್ಲಿದ್ದು ಮಹಜರು, ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಇಲಾಖೆಗೆ ನೆರವಾದರು.
ಸಂಬಂಧಿಕರು ಮಣಿಪಾಲ ಪೋಲಿಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.














