4:50 PM Tuesday26 - November 2024
ಬ್ರೇಕಿಂಗ್ ನ್ಯೂಸ್
ತೀರ್ಥಹಳ್ಳಿ ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ: ತನಿಖೆ ಆರಂಭ ಕಳೆದ ಬಾರಿ ಅರ್ಧಂಬರ್ಧ ಸುಣ್ಣಬಣ್ಣ ಕಂಡ ತುಂಗಾ ಕಮಾನು ಸೇತುವೆಗೆ ಈ ಬಾರಿ… ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಕೋಲಾರ ಪ್ರಥಮ: ಜಿಲ್ಲಾಧಿಕಾರಿ ಅಕ್ರಂ ಪಾಷಾಗೆ… ಚನ್ನಪಟ್ಟಣದಲ್ಲಿ ಸೋಲು: ನಿಖಿಲ್ ಕುಮಾರಸ್ವಾಮಿಗೆ ರಕ್ತದಲ್ಲಿ ಪತ್ರ ಬರೆದು ಧೈರ್ಯ ತುಂಬಿದ ಕಾರ್ಯಕರ್ತ! ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ

ಇತ್ತೀಚಿನ ಸುದ್ದಿ

ದೂರು ನೀಡಿದರೆ ಮೀಟರ್ ಬಡ್ಡಿ ದಂಧೆಗೆ ಕಡಿವಾಣ: ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್

15/09/2022, 09:42

ವರದಿ: ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ

info.reporterkarnataka@gmail.com

ಮೀಟರ್‌ ಬಡ್ಡಿ ದಂಧೆ ಜಿಲ್ಲೆಯಲ್ಲಿ ಜಮೀನುಗಳನ್ನು ನೋಂದಣಿ ಮಾಡಿಸಿಕೊಂಡು ಸಾಲ ನೀಡುವವರ ಪಟ್ಟಿಯನ್ನು ತಯಾರಿಸಲಾಗಿದ್ದು , ಪೊಲೀಸ್ ಇಲಾಖೆಯ ಬಳಿ 150 ಕ್ಕೂ ಹೆಚ್ಚು ಎಕರೆ ಬರೆಸಿಕೊಂಡಿರುವ ಮಾಹಿತಿ ಇದ್ದು , ಅರ್ಜಿದಾರರು ಧೈರ್ಯವಾಗಿ ದೂರು ನೀಡಲು ಮುಂದೆ ಬಂದರೆ ಜಮೀನುಗಳನ್ನು ನ್ಯಾಯಯುತವಾಗಿ ಬಿಡಿಸಿಕೊಡಲು ಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಘೋಷಿಸಿದರು. 

ನಗರದ ಪತ್ರಕರ್ತರ ಭವನದಲ್ಲಿ  ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು . ದೂರು ಬಂದ ಪ್ರಕರಣಗಳಲ್ಲಿ ಈಗಾಗಲೇ ಕಾನೂನು ಕ್ರಮವಹಿಸಿ ತನಿಖೆ ನಡೆಸಲಾಗುತ್ತಿದೆ . ಇಂತ ಅನೇಕ ಪ್ರಕರಣಗಳು ಕೋಲಾರ ಜಿಲ್ಲೆಯಲ್ಲಿ ನಡೆದಿದ್ದು , ಜನತೆ ದೂರು ನೀಡಿದರೆ ಎಟಿಎಂ ಕಾರ್ಡ್‌ಗಳನ್ನು ಪಡೆದು , ಜಮೀನು ಬರೆಸಿಕೊಂಡು ಜನರ ರಕ್ತ ಹೀರುತ್ತಿರುವ ಮೀಟರ್ ಬಡ್ಡಿ ದಂಧೆಯನ್ನು ಕೊನೆಗಾಣಿಸುವುದಾಗಿ ಪ್ರಕಟಿಸಿದರು . ಆಕಸ್ಮಿಕವಾಗಿ ತವರು ಜಿಲ್ಲೆಯಲ್ಲಿ ಕೆಲಸ ಮಾಡುವ ಅವಕಾಶ ತಮಗೆ ದೊರೆತಿದ್ದು , ಸಮಸ್ಯೆ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದು , ಪೊಲೀಸ್ ಇಲಾಖೆಗೆ ಬೇಕು ಬೇಡಗಳ ಪಟ್ಟಿ ಸಿದ್ಧಪಡಿಸಿ ಕಾರ್ಯೋನ್ಮುಖವಾಗಿರುವುದಾಗಿ ವಿವರಿಸಿದರು . ಕೋಲಾರ ಜಿಲ್ಲೆಯಲ್ಲಿ ಹೆಚ್ಚಳವಾಗಿದ್ದ ಜೂಜು ಅಡ್ಡೆ . ಮಟ್ಕಾ , ಮರಳು ದಂಧೆ , ಕೆಂಪು ಚಂದನ ಸಾಗಾಣಿಕೆ , ರೌಡಿ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮವಹಿಸಿದ್ದು , ಅಪರಾಧಗಳ ಸಂಖ್ಯೆ ಕ್ರಮೇಣ ಇಳಿಮುಖವಾಗುತ್ತಿದೆ . ಪೊಲೀಸ್ ಇಲಾಖೆಯ ಅಧಿಕಾರಿ ಸಿಬ್ಬಂದಿ ಯಾರದೇ ಪ್ರಭಾವ ಬೀರದೆ ನೇರವಾಗಿ ತಮ್ಮೊಂದಿಗೆ ತಮ್ಮ ಕಷ್ಟ ಸುಖ ಹಂಚಿಕೊಳ್ಳಲು ಅವಕಾಶ ನೀಡಲಾಗಿದೆಯೆಂದು ಹೇಳಿದರು . ಕೋಲಾರ ಜಿಲ್ಲೆಯ ಕೆಲವು ಠಾಣೆಗಳನ್ನು ಖಾಸಗಿ ವ್ಯಕ್ತಿಗಳು ನಿರ್ವಹಣೆ ಮಾಡುತ್ತಿದ್ದು , ಇಂತ ಎರಡು ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟಲಾಯಿತು . ಠಾಣೆಗಳಲ್ಲಿ 5 ರಿಂದ 17 ವರ್ಷದವರೆವಿಗೂ ಸುದೀರ್ಘ ಅವಧಿಗೆ ಠಿಕಾಣಿ ಹೂಡಿದ್ದ 250 ಮಂದಿ ಸಿಬ್ಬಂದಿಯನ್ನು  ಪಾರದರ್ಶಕವಾಗಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಲಾಯಿತು . ರೌಡಿ ಶೀಟರ್‌ಗಳ ಪೆರೇಡ್ ನಡೆಸಿ ಸನ್ನಡತೆಯ ಆಧಾರದ ಮೇಲೆ 40 ಮಂದಿಯನ್ನು ರೌಡಿ ಪಟ್ಟಿಯಿಂದ ವಿಮುಕ್ತಿಕೊಡಿಸಲಾಯಿತು . ಹಾಗೆಯೇ ವಿವಿಧ ಕೊಲೆ ಪ್ರಕರಣಗಳಲ್ಲಿದ್ದ 65 ಮಂದಿಯನ್ನು ರೌಟಿ ಪಟ್ಟಿಗೆ ಸೇರಿಸಲಾಯಿತು . 8 ಮಂದಿಯನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಶಿವಾರಸ್ಸು ಮಾಡಲಾಗಿದೆ ಎಂದು ವಿವರಿಸಿದರು . ಮುಳಬಾಗಿಲು ಜಗನ್ನೋಹನ ರೆಡ್ಡಿ , ಪೈಂಟರ್ ರಮೇಶ್ ಕೊಲೆ ಪ್ರಕರಣದಲ್ಲಿ 15 ಮಂದಿಯ ಮೇಲೆ ಮೊಟ್ಟ ಮೊದಲ ಬಾರಿಗೆ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು , ತನಿಖೆ ನಡೆಯುತ್ತಿದೆ . ಜೂಜು ನಡೆಸುತ್ತಿದ್ದ ನಂಗಲಿ ರೆಸಾರ್ಟ್ ಮೇಲೆ ದಾಳಿ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗಿದೆ . ಕೋಲಾರ ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಭಾಗವಹಿಸಿದ್ದ ಪೊಲೀಸ್ ಸಿಬ್ಬಂದಿಯನ್ನು ಅಮಾನತ್ ಮಾಡಲಾಗಿದೆ ಎಂದು ತಿಳಿಸಿದರು . ಕಾನೂನು ಸುವ್ಯವಸ್ಥೆ ಪಾಲಿಸುವ ವಿಚಾರದಲ್ಲಿ ಗಡಿಯಾರ ಗೋಪುರ ಪ್ರಕರಣವನ್ನು ಸುಖಾಂತ್ಯಗೊಳಿಸಿ ತ್ರಿವರ್ಣ ಧ್ವಜ ಹಾರಿಸಲಾಯಿತು . ಮಾಲೂರಿನಲ್ಲಿ ಗಣೇಶ ವಿಗ್ರಹಗಳ ಭಗ್ನಗೊಳಿಸಿ ಶಾಂತಿ ಕದಡುವ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿ ಜೈಲಿಗಟ್ಟಲಾಯಿತು . ಚೈಲ್‌ಲಿಂಕ್ ಮೂಲಕ ನಿರುದ್ಯೋಗಿಗಳಿಂದ ಹಣ ಕಸಿಯುತ್ತಿದ್ದ ಜಾಲವನ್ನು ಬೇಧಿಸಲಾಯಿತು . ಗಾಂಜಾ ಸೇವನೆ ಪ್ರಕರಣಗಳನ್ನು ಶೂನ್ಯಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆಯೆಂದರು . ಇದೇ ಮೊದಲ ಬಾರಿಗೆ ಕೋಲಾರ ನಗರದಲ್ಲಿ ಸಾರಿಗೆ ದಟ್ಟಣೆಯನ್ನು ಸುಧಾರಿಸಿದ್ದು , ಏಕ ಮುಖ ಸಂಚಾರ , ಪಾರ್ಕಿಂಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ . ಆದರೂ , ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿರುವ ದೂರುಗಳಿದ್ದು , ತೆರವುಗೊಳಿಸಲಾಗುತ್ತದೆ . ಮನೆಗಳ್ಳತನ , ಸರಗಳ್ಳತನ ನಿಯಂತ್ರಿಸಲು ಪೊಲೀಸರ ಮಪ್ತಿಗಸ್ತನ್ನು ತೀವ್ರಗೊಳಿಸಲಾಗಿದೆ ಎಂದರು . ಕೋಲಾರ ನಗರವನ್ನು ಸಿಸಿ ಕ್ಯಾಮೆರಾ ವ್ಯಾಪ್ತಿಗೆ ತರುವ ಯೋಜನೆಯನ್ನು ಕಂಪನಿಗಳ ಸಿಎಸ್‌ಆರ್ ನಿಯಡಿ ಒಂದೆರಡು ತಿಂಗಳುಗಳಲ್ಲಿ ಜಾರಿಗೆ ತರಲಾಗುವುದು . ಇದಕ್ಕಾಗಿ ವಿಸ್ಟಾನ್ ಮತ್ತು ಕಿಯೋನಿಕ್ಸ್ ಕಂಪನಿಗಳು ಮುಂದೆ ಬಂದಿವೆ . ಸುಮಾರು 1 ಕೋಟಿ ವೆಚ್ಚದಲ್ಲಿ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಅಪರಾಧ ಕಾನೂನ ಉಲ್ಲಂಘನೆ ಪ್ರಕರಣಗಳ ಮೇಲೆ ನಿಗಾ ಇಡಲಾಗುವುದು ಎಂದು ಪ್ರಕಟಿಸಿದರು . ಇಲಾಖೆಯ ಯಾವುದೇ ದೂರುಗಳ ಬಗ್ಗೆ ಸಾರ್ವಜನಿಕರು ತಮಗೆ ನೇರವಾಗಿ ದೂರು ನೀಡಬಹುದು ಎಂದು ಘೋಷಿಸಿದ ಅವರು , ಪೊಲೀಸ್ ಇಲಾಖೆಯಲ್ಲಿ ತಪ್ಪು ಮಾಡಿದವರಿಗೆ ತಕ್ಷಣವೇ ಶಿಕ್ಷೆ ಮತ್ತು ಉತ್ತಮ ಸೇವೆ ಸಲ್ಲಿಸಿದವರನ್ನು ಶ್ಲಾ ಸಿ ಹುರಿದುಂಬಿಸಲಾಗುತ್ತಿದೆಯೆಂದು ಹೇಳಿದರು . ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ , ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ  ಕೆ.ಎಸ್.ಗಣೇಶ್ , ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಚಂದ್ರಶೇಖರ್ , ಜಿಲ್ಲಾ ಸಂಘದ ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ,ಜಿಲ್ಲಾ ಸಂಘದ ನಿಕಟಪೂರ್ವ ಅಧ್ಯಕ್ಷ ವಿ.ಮುನಿರಾಜು, ಕೋಲಾರ ಕುಸುಮಾ ಕನ್ನಡ ದಿನಪತ್ರಿಕೆಯ ಸಂಪಾದಕ ಬಾಬಾ ಇತರರು ಹಾಜರಿದ್ದರು .

ಇತ್ತೀಚಿನ ಸುದ್ದಿ

ಜಾಹೀರಾತು