ಇತ್ತೀಚಿನ ಸುದ್ದಿ
ನೀಲೇಶ್ವರ ಬೋಟ್ ಹೌಸ್ ನಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕುಟುಂಬ ಸಂಗಮ
11/09/2022, 22:54

ಮಂಗಳೂರು(reporterkarnataka.com): ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಕನ್ನಡ ಪತ್ರಕರ್ತರ ಕುಟುಂಬ ಸಂಗಮ ನಿಲೇಶ್ವರದ ಬೋಟ್ ಹೌಸ್ ನಲ್ಲಿ ನಡೆಯಿತು.
ಹಚ್ಚಹಸಿರಿನ ನಿಸರ್ಗ, ಎತ್ತ ನೋಡಿದರೂ ಕಲ್ಪವೃಕ್ಷ, ಹೊಲ ಗದ್ದೆ, ತೊರೆಯ ಜುಳು ಜುಳು ನಾದದೊಂದಿಗೆ ಪತ್ರಕರ್ತರನ್ನು ಹೊತ್ತ ಬೋಟ್ ಫುಲ್ ಕಲರ್ ಫುಲ್ ಆಗಿತ್ತು. ಈ ಸಂದರ್ಭದಲ್ಲಿ ಮಾಧ್ಯಮ ಕೈಪಿಡಿ ಬಿಡುಗಡೆ ಮಾಡಲಾಯಿತು. ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ದ.ಕ. ಜಿಲ್ಲಾಧ್ಯಕ್ಷ ಶ್ರೀನಿವಾಸ ಮುಂತಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಅವರು ಶಿವಾನಂದ ತಗಡೂರು ಅವರಿಗೆ ಶಾಲು ಹೊದಿಸಿ ಗೌರವಿಸಿದರು.