ಇತ್ತೀಚಿನ ಸುದ್ದಿ
ಕೂಡ್ಲಿಗಿ: ಹಕ್ಕೊತ್ತಾಯ ಮಂಡಿಸಿ ಕೂಲಿ ಕಾರ್ಮಿಕರ ಪ್ರತಿಭಟನೆ; ತಾಸುಗಟ್ಟಲೆ ತಡವಾಗಿ ಆಗಮಿಸಿದ ತಾಪಂ ಅಧಿಕಾರಿ ವೈ.ರವಿ ಕುಮಾರ್
09/09/2022, 19:40
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರು ತಮ್ಮ ತಮ್ಮ ವಿವಿಧ ಹಕ್ಕೊತ್ತಾಯಿಸಿ ತಾಪಂ ಆವರಣದಲ್ಲಿ ಪ್ರತಿಭಟನೆ ಮಾಡಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರ ಯೋಜನೆಯಡಿ ಸಮರ್ಪಕವಾಗಿ ಕೂಲಿ ಕೆಲಸ ಕೊಡುತ್ತಿಲ್ಲ, ಸಮರ್ಪಕವಾಗಿ ಕೂಲಿ ಕಲಸ ಕೊಡಬೇಕೆಂದು ಕಾರ್ಮಿಕರು ಆಗ್ರಹಿಸಿದರು. ಸಂಬಂಧಿಸಿದ ಅಧಿಕಾರಿಗಳು ಕಾರ್ಮಿಕರಿಗೆ ಸ್ಪಂದಿಸುತ್ತಿಲ್ಲ ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು. ಬಡಜನರ ಚೌಡಾಪುರ ಗ್ರಾಮ ಪಂಚಾಯಿತಿ ಅಮಲಾಪುರ ಗ್ರಾಮದಲ್ಲಿ ಇದುವರೆಗೆ ನಿರಂತರ ಕೆಲಸ ಕೊಡುತ್ತಿಲ್ಲ. ಇನ್ನೂರು ಜನ ಎನ್ ಎಮ್ ಅರ್ ತೆಗೆದು ಅದರಲ್ಲಿ ನೂರು ಜನಕ್ಕೆ ಹಣ ಪಾವತಿಸಿದ್ದಾರೆ. ಕೆಲಸ ಕೊಟ್ರೂ ಕೆಲಸ ಮಾಡಿದ ಅಳತೆ ಸೆರೆಯಾಗಿದ್ದರು ಕೂಡ,ಕಡಿಮೆ ಕುಾಲಿ ಪಾವತಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದರು.
ನೂರು ಜನರಿಗೆ ಕೆಲಸದ ಕೂಲಿ ಕೊಟ್ಟಿರುವುದಿಲ್ಲ ಎಂದು ಎಂ. ಬಿ. ಕೊಟ್ರಮ್ಮ ದೂರಿದರು. ಕಡಿಮೆ ಕೂಲಿ ಕೊಡುತ್ತಾರೆ ಇವುಗಳಲ್ಲಿಸೂಲದಹಳ್ಳಿ ಪಂಚಾಯಿತಿ ಅಗ್ರಹಾರ ಗುಣಸಾಗರ ಗ್ರಾಮದಲ್ಲಿ ಕೂಡ ಕಡಿಮೆ ಕೂಲಿ ಕೊಟ್ಟಿರುತ್ತಾರೆಂದು ಕಾರ್ಮಿಕರು ಆರೋಪಿಸಿದರು. ಮರಬನಹಳ್ಳಿ ಗ್ರಾಮದಲ್ಲಿ ಕೂಡ ಕಡಿಮೆ ಕೂಲಿ ಪಾವತಿಸುತ್ತಾರೆ, ಕಳೆದ 2ವರ್ಷದಿಂದ ಕಾಯಕ ಬಂಧುಗಳ ಗೌರವಧನ ಪಾವತಿಸಿಲ್ಲ, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಾರದ ಅಧಿಕಾರಿ ಕಾರ್ಮಿಕ ಮುಖಂಡರಿಂದ ಆಕ್ರೋಶ: ತಾಪಂ ಕಚೇರಿ ಆವರಣದಲ್ಲಿ ಜರುಗಿದ ಪ್ರತಿಭಟನೆ ಸ್ಥಳಕ್ಕೆ, ಹಲುವು ತಾಸುಗಳಾದರೂ ಅಧಿಕಾರಿ ಬಾರದಿರುವುದಕ್ಕೆ ಕಾರ್ಮಿಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು, ಮತ್ತು ಸಂಬಂಧಿಸಿದಂತೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳನ್ನ ದೂರವಾಣಿ ಮಖಾಂತರ ಸಂಪರ್ಕಿಸಿ ಅಧಿಕಾರಿಯ ನಿರ್ಲಕ್ಷ್ಯ ಧೋರಣೆ ಕುರಿತು ದೂರಿದರು. ಕಾರ್ಮಿಕರು ಹಾಗೂ ಮುಖಂಡರು ಪ್ರತಿಭಟನೆ ಸ್ಥಳದಲ್ಲಿಯೆ ಮಧ್ಯಾಹ್ನದ ಊಟ ತಯಾರಿಸಿ ಸವಿದು, ತಾಪಂ ಅಧಿಕಾರಿಯ ನಿರ್ಲಕ್ಷ್ಯ ಧೋರಣೆ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದರು. ತಮ್ಮ ಕಚೇರಿ ಆವರಣದಲ್ಲಿ ಜರುಗುತ್ತಿರುವ ಪ್ರತಿಭಟನಾ ಸ್ಥಳಕ್ಕೆ, ತೀರಾ ತಡವಾಗಿ ಆಗಮಿಸಿದ ತಾಪಂ ಅಧಿಕಾರಿ ವೈ.ರವಿ ಕುಮಾರ್ ಅವರಿಗೆ ಕಾರ್ಮಿಕರು ಮುಖಂಡರಾದ ಎಮ್.ಬಿ.ಕೊಟ್ರಮ್ಮ ನೇತೃತ್ವದಲ್ಲಿ, ತಮ್ಮ ಹಕ್ಕೊತ್ತಾಯ ಪತ್ರ ನೀಡಿದರು. ಈ ಸಂದರ್ಭದಲ್ಲಿ ಪರಮೇಶ್ವರಪ್ಪ, ಬಸವರಾಜ, ಸತ್ಯಮ್ಮ,ರೇಣುಕಮ್ಮ, ಲಕ್ಷ್ಮಿದೇವಿ, ಬಸಮ್ಮ,ಚೌಡಮ್ಮ, ಚನ್ನಪ್ಪ, ಮಾರಪ್ಪ,ತಿಪ್ಪೇಶ, ಬಿ.ತಿಪ್ಪೇಶ, ಶರಣಪ್ಪ,ಭೀಮೇಶ,ಹೊನ್ನೂರಪ್ಪ, ಭೀಮ,ಚನ್ನಪ್ಪ,ಭೀಮ್ ರಾಜ್, ಎನ್. ನಾಗರಾಜ್, ದುರುಗಪ್ಪ. ಹುಲುಗಪ್ಪ.ಈರಪ್ಪ.ಕೂಡ್ಲಿಗಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರಾದ ಪರಮೇಶಿ, ಮೇಘನಾ. ಕುಮಾರಸ್ವಾಮಿ ಸೇರಿದಂತೆ ನೂರಾರು ಕಾರ್ಮಿಕರು ಇದ್ದರು.