ಇತ್ತೀಚಿನ ಸುದ್ದಿ
ಅಥಣಿ: ಕೃಷ್ಣಾ ನದಿ ಪಾಲಾಗಿದ್ದ ಯುವಕನ ಶವ ಪತ್ತೆ; ಅಗ್ನಿಶಾಮಕ ದಳ, ಎನ್ ಡಿಆರ್ ಎಫ್ ಕಾರ್ಯಾಚರಣೆ
28/08/2022, 13:24
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಆಕಸ್ಮಿಕ ಕಾಲು ಜಾರಿ ಕೃಷ್ಣಾ ನದಿ ಪಾಲಾಗಿದ್ದ ಯುವಕನ ಶವ ಭಾನುವಾರ ಬಳಗ್ಗೆ ಅಥಣಿ ತಾಲೂಕಿನ ಸತ್ತಿ ಗ್ರಾಮದ ನದಿ ದಡದಲ್ಲಿ ಪತ್ತೆಯಾಗಿದೆ.
ಶ್ರಾವಣ ಮಾಸದ ಪೂಜೆಗಾಗಿ ಸ್ನಾನ ಮಾಡಿ ದೇವರಿಗೆ ನೀರು ಒಯ್ಯಲು ನದಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿತ್ತು.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಕಾಗಜಿ ಗಲ್ಲಿಯ ನಿವಾಸಿ ಸಾಗರ ರಾಜು ಹೊನಕಟ್ಟಿ (23) ಎಂಬಾತನೇ ಮೃತಪಟ್ಟ ಯುವಕ. ಕಳೆದ ಎರಡು ದಿನಗಳಿಂದ ಹಲ್ಯಾಳ-ದರೂರ ಬ್ರಿಡ್ಜ್ ಅಕ್ಕಪಕ್ಕ ಹಾಗೂ ಇತರ ಕಡೆ ಅಗ್ನಿಶಾಮಕದಳ ಹಾಗೂ ಎಸ್.ಡಿ.ಆರ್.ಎಫ್ ತಂಡದವರು ಸುರಿಯುವ ಮಳೆಯಲ್ಲಿಯೂ ಕೂಡ ಶೋಧ ನಡೆಸಿದ್ದರು.








ಸ್ಥಳಕ್ಕೆ ಅಗ್ನಿಶಾಮಕದಳ, ಎಸ್.ಡಿ.ಆರ್.ಎಫ್ ಹಾಗೂ ಪೋಲಿಸ್ ಆಧಿಕಾರಿಗಳು ಆಗಮಿಸಿ ಯುವಕನ ಶವ ಹೊರತೆಗೆದಿದ್ದಾರೆ. ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಜರುಗಿದೆ.














