ಇತ್ತೀಚಿನ ಸುದ್ದಿ
ಅಧ್ಯಕ್ಷರಾಗಲು ಪ್ಯಾನ್–ಇಂಡಿಯಾ ವರ್ಚಸ್ಸು ಹೊಂದಿರುವ ರಾಹುಲ್ ಗಾಂಧಿ ಮಾತ್ರ ಅರ್ಹರು: ಖರ್ಗೆ
27/08/2022, 19:05
ಬೆಂಗಳೂರು(reporterkarnataka.com): ರಾಹುಲ್ ಗಾಂಧಿಯಂತೆ ಪ್ಯಾನ್–ಇಂಡಿಯಾ ವರ್ಚಸ್ಸು ಹೊಂದಿರುವವರು ಬೇರೆ ಯಾರೂ ಇಲ್ಲ. ಆದ್ದರಿಂದ ಅವರನ್ನೇ ಪುನಃ ಕಾಂಗ್ರೆಸ್ ಅಧ್ಯಕ್ಷರಾಗುವಂತೆ ಒತ್ತಾಯಿಸಲಾಗುವುದು ಎಂದು ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪಕ್ಷದ ಮತ್ತು ದೇಶದ ಹಿತಕ್ಕಾಗಿ ಮತ್ತು ಆರ್ ಎಸ್ ಎಸ್ –ಬಿಜೆಪಿ ವಿರುದ್ಧದ ಹೋರಾಟಕ್ಕಾಗಿ ಅಧಿಕಾರ ವಹಿಸಿಕೊಳ್ಳುವಂತೆ ಅವರ ಬಳಿ ವಿನಂತಿಸಲಾಗುವುದು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನುಡಿದರು.
ಪಕ್ಷವನ್ನು ಮುನ್ನಡೆಸುವವರು ದೇಶಾದ್ಯಂತ ಪರಿಚಿತರಾಗಿರಬೇಕು. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ, ಪಶ್ಚಿಮ ಬಂಗಾಳದಿಂದ ಗುಜರಾತ್ವರೆಗೆ ಬೆಂಬಲ ಹೊಂದಿರಬೇಕು. ಪಕ್ಷದಲ್ಲಿ ಸಂಪೂರ್ಣವಾದ ಮನ್ನಣೆ ಇರಬೇಕು ಎಂದು ಹೇಳಿದರು.