ಇತ್ತೀಚಿನ ಸುದ್ದಿ
ವಿಡಿಯೋ ಕಾಲ್ ಮಾಡಿ ಬೆತ್ತಲಾದ ಯುವತಿ: ಹಣ ನೀಡುವಂತೆ ಹುಣಸೂರು ಯುವಕನ ಬ್ಲ್ಯಾಕ್ ಮೇಲ್
23/08/2022, 10:40
ಮೈಸೂರು(reporterkarnataka.com): ಯುವತಿಯೊಬ್ಬಳು ಬೆತ್ತಲೆಯಾಗಿ ಹುಣಸೂರಿನ ಯುವಕನೊಬ್ಬನಿಗೆ ವೀಡಿಯೊ ಕಾಲ್ ಮಾಡಿ ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ನಡೆದಿದೆ.
ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ವಾಸುಗೆ ಹಣ ನೀಡುವಂತೆ ಯುವತಿ ಬ್ಲಾಕ್ ಮೇಲ್ ಮಾಡಿದ್ದಾಳೆ. ವಿಡಿಯೋ ಕಾಲ್ ಗೆ ಮೊದಲು ಮೆಸೇಜ್ ಮಾಡಿ ತನ್ನನ್ನು ಅಮೃತಾ ಎಂದು ಪರಿಚಯ ಮಾಡಿಕೊಂಡಿದ್ದ ಯುವತಿ ಬಳಿಕ ವಿಡಿಯೋ ಕಾಲ್ ಮಾಡಿ ನಗ್ನಳಾಗಿದ್ದಾಳೆ. ಕೂಡಲೇ ವಿಡಿಯೋ ಕಾಲ್ ಕಟ್ ಮಾಡಲಾಗಿದೆ. ವಾಸು ವಿಡಿಯೋ ಕಾಲ್ ಕಟ್ ಮಾಡಿದ ನಂತರ ವಿಡಿಯೋ ಕಾಲ್ ರೆಕಾರ್ಡ್ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದು, ಮೈಸೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.