ಇತ್ತೀಚಿನ ಸುದ್ದಿ
ಮಂಗಳೂರು ನಗರದ ಹತ್ತಾರು ಸಮಸ್ಯೆ: ಪಾಲಿಕೆ ಕಮಿಷನರ್ ಗೆ ಆಮ್ ಆದ್ಮಿ ಪಾರ್ಟಿ ದೂರು
18/08/2022, 22:15

ಮಂಗಳೂರು(reporterkarnataka.com): ಆಮ್ ಆದ್ಮಿ ಪಾರ್ಟಿ(ಎಎಪಿ) ವತಿಯಿಂದ ನಗರದ ಹತ್ತಾರು ಸಮಸ್ಯೆಗಳ ಬಗ್ಗೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಿಗೆ ಲಿಖಿತವಾಗಿ ದೂರು ನೀಡಲಾಯಿತು.
ಎಎಪಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಅವರ ನೇತೃತ್ವದಲ್ಲಿ ಪಕ್ಷದ ನಿಯೋಗ ಗುರುವಾರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರನ್ನು ಭೇಟಿಯಾಗಿ ನಗರದ ಹಲವು ಸಮಸ್ಯೆಗಳ ಕುರಿತು ಆಯುಕ್ತರ ಗಮನಕ್ಕೆ ತಂದು ಚರ್ಚಿಸಲಾಯಿತು.
ಸಾಮಾಜಿಕ ಕಾರ್ಯಕರ್ತ ಹಾಗೂ ಪಕ್ಷದ ಧುರೀಣ ಜೆರಾಲ್ಡ್ ಟವರ್ಸ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು