ಇತ್ತೀಚಿನ ಸುದ್ದಿ
ಬೆಂಗಳೂರಿಗೆ ವಿಶ್ವದ ಟಾಪ್ ಸೇಫ್ ಸಿಟಿ ಪಟ್ಟ: ಲಂಡನ್ , ಸ್ಯಾನ್ ಫ್ರಾನ್ಸಿಸ್ಕೊಗಿಂತ ಹೆಚ್ಚು ಬಂಡವಾಳ ಸಿಲಿಕಾನ್ ಸಿಟಿಯತ್ತ!!
17/08/2022, 09:59
ಬೆಂಗಳೂರು(reporterkarnataka.com): ಸಮೀಕ್ಷೆಯೊಂದರ ಪ್ರಕಾರ ವಿಶ್ವದ ಟಾಪ್ ಸೇಫ್ ಸಿಟಿ ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ.
ಕೌಲಾಲಂಪುರ, ಲಿಸ್ಬನ್, ದುಬೈ, ಮೆಕ್ಸಿಕೋ ಸಿಟಿ ಮತ್ತು ರಿಯೊ ಡಿ ಜನೈರೊ ನಗರಗಳ ಸಾಲಿಗೆ ಬೆಂಗಳೂರು ಕೂಡ ಸೇರಿದೆ. ವಿಕಸನಶೀಲ ನಗರಗಳಲ್ಲಿ ಸಿಲಿಕಾನ್ ಸಿಟಿ ಕೂಡ ಸೇರಿದೆ.ಎಂದು “ಬ್ಲೂಮ್‌ಬರ್ಗ್ ’ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಬೆಂಗಳೂರಿಗೆ ಭಾರತದ ಸ್ಟಾರ್ಟಪ್ ರಾಜಧಾನಿ, ಸಿಲಿಕಾನ್ ವ್ಯಾಲಿ, ಉದ್ಯಾನ ನಗರಿ ಎಂಬ ಹಿರಿಮೆ ಇದೆ. ಒಂದು ಅಂದಾಜಿನ ಪ್ರಕಾರ ಲಂಡನ್ ಅಥವಾ ಸ್ಯಾನ್ ಫ್ರಾನ್ಸಿಸ್ಕೊಗೆ ಹೋಲಿಸಿದರೆ ಬಂಡವಾಳವು ಬೆಂಗಳೂರಿನತ್ತ ವೇಗವಾಗಿ ಹರಿದು ಬರುತ್ತಿದೆ. ಈಗ ಜಗತ್ತಿನ ಟಾಪ್ ಸೇಫ್ ಸಿಟಿ ಪಟ್ಟಿ ಯಲ್ಲಿ ಬೆಂಗಳೂರು ಸ್ಥಾನ ಪಡೆದಿದೆ.
ಬೆಂಗಳೂರು ಉದ್ಯೋಗ ಮತ್ತು ಕೈಗೆಟುಕುವ ಐಷಾರಾಮಿ ಜೀವನಕ್ಕೆ ಜೀವನ ಶೈಲಿಯಿಂದ ಜಾಗತಿಕ ಸಮುದಾಯಕ್ಕೆ ನೆಚ್ಚಿನ ನಗರಿಯಾಗಿದೆ. ಇದರ ಜತೆಗೆ ಕೌಲಾಲಂಪುರ, ಲಿಸ್ಬನ್, ದುಬೈ, ಮೆಕ್ಸಿಕೋ ಸಿಟಿ ಮತ್ತು ರಿಯೊ ಡಿ ಜನೈರೊ ನಗರಗಳು ಕೂಡ ವಿಕಸನಶೀಲವಾಗುತ್ತಿವೆ ಎಂದು ವರದಿಯಲ್ಲಿ “ಬ್ಲೂಮ್‌ಬರ್ಗ್ ’ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.
ಪಟ್ಟಿಯಲ್ಲಿರುವ 6 ನಗರಗಳು
ಬೆಂಗಳೂರು (ಭಾರತ)
ಕೌಲಾಲಂಪುರ (ಮಲೇಷ್ಯಾ)
ಲಿಸ್ಬನ್ (ಪೋರ್ಚಗಲ್)
ದುಬೈ (ಯುಎಇ)
ಮೆಕ್ಸಿಕೋ ಸಿಟಿ (ಮೆಕ್ಸಿಕೊ)
ರಿಯೊ ಡಿ ಜನೈರೊ (ಬ್ರೆಜಿಲ್)