10:44 AM Friday21 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ಕೇರಳ ಸರಕಾರ ಹಾಗೂ ರಾಜ್ಯಪಾಲರ ನಡುವೆ ಶೀತಲ ಸಮರ: 11 ಸುಗ್ರೀವಾಜ್ಞೆಗಳಿಗೆ ಸಹಿ ಹಾಕದೆ ವಾಪಸ್

11/08/2022, 10:46

ತಿರುವನಂತಪುರ(reporterkarnataka.com);ಕೇರಳ ರಾಜ್ಯಪಾಲರು 11 ಸುಗ್ರೀವಾಜ್ಞೆಗಳಿಗೆ ಸಹಿ ಹಾಕದೆ ವಾಪಸ್ ಕಳುಹಿಸುವುದರೊಂದಿಗೆ ಕೇರಳದಲ್ಲಿ ಸರಕಾರ ಮತ್ತು ರಾಜ್ಯಪಾಲ ಆರೀಫ್​ ಮೊಹಮ್ಮದ್​ ಖಾನ್​ ನಡುವೆ ಶೀತಲ ಸಮರ ಮುಂದುವರಿದಿದೆ. ಇದರೊಂದಿಗೆ ವಿಶೇಷ ಅಧಿವೇಶನಕ್ಕೆ ಕೇರಳ ಸರಕಾರ ಮೊರೆ ಹೋಗಿದೆ.

ರಾಜ್ಯಪಾಲರ ಅಂಕಿತ ಸಿಗದ ಹಿನ್ನೆಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಇವುಗಳನ್ನು ಪಾಸ್​ ಮಾಡಿಕೊಳ್ಳಲೆಂದೇ​ ವಿಶೇಷ ಅಧಿವೇಶನ ಕರೆದಿದೆ.

ಎರಡು ದಿನಗಳ ಹಿಂದೆ ರಾಜ್ಯಪಾಲರ ಅಂಕಿತಕ್ಕಾಗಿ ಸರ್ಕಾರ ಸುಗ್ರೀವಾಜ್ಞೆಗಳನ್ನು ಕಳುಹಿಸಲಾಗಿತ್ತು. ಆದರೆ, ರಾಜ್ಯಪಾಲ ಯಾವುದೇ ದಾಖಲೆಗಳನ್ನು ಓದದೆ ಸಹಿ ಹಾಕಲು ನಿರಾಕರಿಸಿದ್ದರು. ಹೀಗಾಗಿಯೇ ಮರು ಪ್ರಕಟಣೆಯಾಗಬೇಕಿದ್ದ ಸುಗ್ರೀವಾಜ್ಞೆಗಳು ರದ್ದಾಗಿವೆ.

ಇದೀಗ ರಾಜ್ಯಪಾಲರಿಗೆ ಸೆಡ್ಡು ಹೊಡೆದಿರುವ ಪಿಣರಾಯಿ ಸರ್ಕಾರ ಸಚಿವ ಸಂಪುಟ ಸಭೆ ಕರೆದು, 10 ದಿನಗಳ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಿದೆ. ಈ ಅಧಿವೇಶನದಲ್ಲಿ ಮಸೂದೆಗಳನ್ನು ಮಂಡಿಸಿ ಸದನದಲ್ಲೇ ಅಂಗೀಕಾರ ಪಡೆಯುವ ಉದ್ದೇಶ ಸರ್ಕಾರದ್ದು. 140 ಸದಸ್ಯ ಬಲದ ವಿಧಾನಸಭೆಯಲ್ಲಿ 99 ಸದಸ್ಯರು ಆಡಳಿತಾರೂಢ ಎಡಪಕ್ಷಗಳಿಗೆ ಸೇರಿದ್ದು, ಈ ಎಲ್ಲ ಮಸೂದೆಗಳು ಕ್ಷಣಾರ್ಧದಲ್ಲಿ ಅಂಗೀಕಾರಗೊಳ್ಳುವ ನಿರೀಕ್ಷೆ ಇದೆ.

ಇತ್ತ, ಅಧಿವೇಶನ ನಡೆಸುವ ಬಗ್ಗೆ ರಾಜ್ಯಪಾಲರಿಗೆ 14 ದಿನಗಳು ಮುಂಚಿತವಾಗಿ ನೋಟಿಸ್​ ನೀಡಬೇಕು. ಹೀಗಾಗಿಯೇ ಸ್ಪೀಕರ್​ ಜೊತೆ ಚರ್ಚಿಸಿ ಸರ್ಕಾರ ಅಧಿವೇಶನಕ್ಕೆ ದಿನಾಂಕ ನಿಗದಿ ಮಾಡಲಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು