ಇತ್ತೀಚಿನ ಸುದ್ದಿ
ಮಡಿಕೇರಿ – ಮಂಗಳೂರು ಹೆದ್ದಾರಿ; ಇಂದು ರಾತ್ರಿ ವಾಹನ ಸಂಚಾರ ಬಂದ್: ಜಿಲ್ಲಾಧಿಕಾರಿ ಆದೇಶ
10/08/2022, 11:03
ಮಡಿಕೇರಿ (reporterkatanak.com): ಮಡಿಕೇರಿ – ಮಂಗಳೂರು ಹೆದ್ದಾರಿಯ ಮದೆನಾಡು ಬಳಿ ಗುಡ್ಡ ಕುಸಿತದ ಆತಂಕ ಎದುರಾದ ಪರಿಣಾಮ ಮಡಿಕೇರಿ -ಮಂಗಳೂರು ರಸ್ತೆ ಸಂಚಾರವನ್ನು ಇಂದು ರಾತ್ರಿ 9 ಗಂಟೆಯಿಂದ ನಾಳೆ ಬೆಳಗ್ಗೆ 6.30 ಗಂಟೆವರೆಗೂ ನಿರ್ಬಂಧಿಸಲಾಗಿದೆ.
ಎಲ್ಲ ತರಹದ ವಾಹನ ಸಂಚಾರ ಬಂದ್ ಮಾಡಿ ಕೊಡಗು ಜಿಲ್ಲಾಧಿಕಾರಿ ಈ ಕುರಿತು ಆದೇಶ ಹೊರಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಸಹಾಯಕ ಇಂಜಿನಿಯರ್ ಅವರಿಂದ ಕೊಡಗು ಜಿಲ್ಲಾಧಿಕಾರಿಗೆ ಮನವಿ ಮಾಡಲಾದ ಹಿನ್ನಲೆ ಮದೆನಾಡು ಬಳಿ ಗುಡ್ಡ ಕುಸಿತದ ಆತಂಕದಿಂದ ವಾಹನ ಪ್ರಯಾಣಿಕರಿಗೆ ಅಪಾಯ ಸಾದ್ಯತೆ ಹಿನ್ನಲೆಯಲ್ಲಿ ರಸ್ತೆ ಸಂಚಾರ ಬಂದ್ ಮಾಡಿ ಆದೇಶ ನೀಡಲಾಗಿದೆ.