ಇತ್ತೀಚಿನ ಸುದ್ದಿ
ಚಿಕ್ಕಮಗಳೂರು: ಗೋ ಹತ್ಯೆ ಮಾಡುತ್ತಿದ್ದ ಮನೆಗೆ ನಗರಸಭೆ ದಾಳಿ; ವಿದ್ಯುತ್ ಸಂಪರ್ಕ ಕಟ್; ಆಸ್ತಿ ಮುಟ್ಟುಗೋಲಿಗೂ ಚಿಂತನೆ?
08/08/2022, 14:32
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಗೋ ಹತ್ಯೆ ತಡೆಯಲು ಹೊಸ ಪ್ರಯೋಗಕ್ಕೆ ಚಿಕ್ಕಮಗಳೂರು ನಗರಸಭೆ ಮುಂದಾಗಿದೆ. ಗೋ ಹತ್ಯೆ, ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ನಗರಸಭೆ ದಾಳಿ ನಡೆಸಿ ಮನೆಯ ವಿದ್ಯುತ್ ಸಂಪರ್ಕ ಬಂದ್ ಮಾಡಿದೆ.
ಮನೆಯ ದಾಖಲೆಗಳನ್ನ ರದ್ದು ಮಾಡಿ, ನಗರಸಭೆ ಆಸ್ತಿಯನ್ನಾಗಿಸಲು ಕೂಡ ಸಿದ್ದತೆ ನಡೆಸಿದೆ.
ಚಿಕ್ಕಮಗಳೂರು ಪೊಲೀಸ್ ಇಲಾಖೆಯ ಜತೆ ಸೇರಿಕೊಂಡು ನಗರಸಭೆ ದಾಳಿ ನಡೆಸಿ ಗೋಮಾಂಸ ವಶಪಡಿಸಿಕೊಂಡಿದೆ. ಚಿಕ್ಕಮಗಳೂರು ನಗರದ ತಮಿಳು ಕಾಲೋನಿಯ ಯಶ್ ಪಾಲ್ ಎಂಬವರಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ಕೆಲ ದಿನದ ಹಿಂದೆ ಗೋಮಾಂಸ ಅಡ್ಡೆಗಳ ಮೇಲೆ ನಗರಸಭೆ ಬುಲ್ಡೋಜರ್ ಪ್ರಯೋಗ ಮಾಡಿತ್ತು.