ಇತ್ತೀಚಿನ ಸುದ್ದಿ
ಸೇವೆಗೊಂದು ವಿಭಿನ್ನ ಹೆಸರು: ಬೆಂಗಳೂರು ಆಟೋರಾಜ ಸಂಸ್ಥೆಗೆ ಕೊಡಗು ಜಿಲ್ಲೆಯಿಂದ 4 ಮಂದಿ ಅನಾಥರು ಸೇರ್ಪಡೆ
05/08/2022, 10:57
ಮಡಿಕೇರಿ(reporterkarnataka.com):
ಕೊಡಗು ಜಿಲ್ಲೆಯ ವಿವಿಧೆಡೆಯಿಂದ ಅನಾಥರು ಬಸ್ ನಿಲ್ದಾಣಗಳಲ್ಲಿ ತಿರುಗಾಡಿಕೊಂಡು ಮಡಿಕೇರಿಯಲ್ಲಿ ಜನರಿಗೆ ತೊಂದರೆ ಕೊಡುತ್ತಿದ್ದ
4’ಮಂದಿ ಅನಾಥರನ್ನು ಬೆಂಗಳೂರಿನ ಆಟೋರಾಜ ಸಂಸ್ಥೆಗೆ ಸೇರಿಸಲಾಗಿದೆ.
ಮಾನಸಿಕ ಅಸ್ವಸ್ಥರಂತೆ ಕಂಡು ಬರುತ್ತಿದ್ದ ಅಸ್ಸಾಂ ಮೂಲದ ಮಹಿಳೆ, ಭಾಗಮಂಡಲದಿಂದ ಒಬ್ಬ ಪುರುಷ, ಗೋಣಿಕೊಪ್ಪದಿಂದ ಇಬ್ಬರು ಮಹಿಳೆಯರನ್ನು ಬೆಂಗಳೂರಿನ ಆಟೋರಾಜ ಫೌಂಡೇಶನ್ ಗೆ ಖುದ್ದಾಗಿ ಹೋಗಿ ಸೇರಿಸಲಾಯಿತು.
ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶಿವಕುಮಾರ್ ಅವರು ಆರೋಗ್ಯ ಇಲಾಖೆಯಿಂದ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಿದ್ದರು. ಅದರಲ್ಲಿ ಬೆಳಗ್ಗೆ 4 ಗಂಟೆಗೆ ಮಾನಸಿಕ ಅಸ್ವಸ್ಥೆ ಯನ್ನು ಮಡಿಕೇರಿ ನಗರದಲ್ಲಿ ಹುಡಿಕಿ ಹುಡಿಕಿ ಸಾಕಾಗಿ ಕೊನೆಗೂ ಪತ್ತೆ ಹಚ್ಚುವಲ್ಲಿ ತಂಡ ಯಶಸ್ವಿಯಾಯಿತು. ಸಾರ್ವಜನಿಕರಿಂದ ಮಾನಸಿಕ ಅಸ್ವಸ್ಥೆ ಮಹಿಳೆಯನ್ನು ಬೇರೆಡೆಗೆ ಸಾಗಿಸಬೇಕೆಂದು ಒತ್ತಡ ಬರುತ್ತಿತ್ತು. ಭಾಗಮಂಡಲಕ್ಕೆ ಅದೇ ಆಂಬ್ಯುಲೆನ್ಸ್ ನಲ್ಲಿ ಹೋಗಿ ಅನಾಥ ವ್ಯಕ್ತಿಯೊಬ್ಬರನ್ನು ಹಾಗೂ ಗೋಣಿಕೊಪ್ಪದಿಂದ ಅನಾಥ 2 ಮಹಿಳೆಯರನ್ನು ಆಂಬುಲೆನ್ಸ್ ನಲ್ಲಿ ಕೂರಿಸಿಕೊಂಡು ಬೆಂಗಳೂರಿನ ಆಟೋರಾಜ ಫೌಂಡೇಶನ್ ಗೆ ಸೇರಿಸಲಾಯಿತು.
ಮಡಿಕೇರಿಯ ಅನಾಥ ಮಹಿಳೆ (ಮಾನಸಿಕ ಅಸ್ವಸ್ಥ ಮಹಿಳೆ ) ಈ ಮಹಿಳೆ ದಾರಿ ಉದ್ದಕ್ಕೂ ತುಂಬಾ ತೊಂದರೆ ಕೊಡುತ್ತಿದ್ದರು. ರಸ್ತೆಯುದ್ದಕ್ಕೂ ಕಿರುಚಾಡುವುದು ಡೋರ್ ತೆಗೆದು ನೆಗೆಯಲು ಪ್ರಯತ್ನಿಸುವುದು ಇವೆಲ್ಲ ಮಾಡುತ್ತಿದ್ದರು. ಮಂಡ್ಯದ ಸಮೀಪ ಈ ಮಹಿಳೆ ಕಾರಿನ ಡೋರ್ ನ ಗ್ಲಾಸ್ ತೆಗೆದು ನೆಗೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಶಿವಕುಮಾರ್ ಹಾಗೂ ಆ್ಯಂಬುಲೆನ್ಸ್ ನ ಸಹ ಡ್ರೈವರ್ ಹಿಡಿದುಕೊಂಡರು. ಇದೆಲ್ಲಾ ಆಗಿ ಬೆಂಗಳೂರಿನ ಅನಾಥಾಶ್ರಮಕ್ಕೆ ಸೇರಿಸುವಾಗ ಸಂಜೆ ಸಮಯ 6 ಗಂಟೆ ಆಗಿತ್ತು. ಇದೆಲ್ಲದರ ನಡುವೆಯೂ ಅನಾಥರನ್ನು ಒಳ್ಳೆಯ ಅನಾಥಾಶ್ರಮಕ್ಕೆ ಸೇರಿಸಿದ ಸಾರ್ಥಕ ಭಾವನೆ ಉಂಟಾಯಿತು .
ಈ ಸಂದರ್ಭದಲ್ಲಿ ಅನಾಥರನ್ನು ಅನಾಥ ಆಶ್ರಮಕ್ಕೆ ಸೇರಿಸಲು ಸಹಕಾರ ಕೊಟ್ಟಂತಹ ಮತ್ತು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಂತಹ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾಕ್ಟರ್ ವೆಂಕಟೇಶ್ ಹಾಗೂ ಜಿಲ್ಲಾ ಮಾನಸಿಕ ಕಾರ್ಯಕ್ರಮದ ಅಧಿಕಾರಿಗಳಾದ ಡಾ. ಆನಂದ್ ಹಾಗೂ ಮಾನಸಿಕ ತಜ್ಞರಾದ ಡೆವಿನ್ ಇವರೆಲ್ಲರಿಗೂ ಕರ್ನಾಟಕ ರಕ್ಷಣಾ ವೇದಿಕೆ ವಂದನೆ ಅರ್ಪಿಸಿದರು.