ಇತ್ತೀಚಿನ ಸುದ್ದಿ
ಗದ್ದೆಯಲ್ಲಿ ಗಾಂಜಾ ಬೆಳೆ: ಇಬ್ಬರ ಬಂಧನ; 9 ಕೆಜಿ ಹಸಿ ಹಾಗೂ 500 ಗ್ರಾಂ ಒಣ ಗಾಂಜಾ ವಶ
03/08/2022, 23:06
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆಯುತ್ತಿದ್ದ ಇಬ್ಬರನ್ನು ರಾಯಬಾಗ ಪೊಲೀಸರು ಬಂಧಿಸಿದ್ದಾರೆ.
ರಾಯಭಾಗ ತಾಲೂಕಿನ ಬೊಮ್ಮನಾಳ ಹಾಗೂ ಬೀರನಾಳ ಗ್ರಾಮದಲ್ಲಿ ಕಬ್ಬಿನ ಗದ್ದೆಯಲ್ಲಿ ಬೆಳೆದಿದ್ದ 9 ಕೆಜಿ ಹಸಿ ಗಾಂಜಾ ಹಾಗೂ 500 ಗ್ರಾಮ ಒಣ ಗಾಂಜಾ ವಶಕ್ಕೆ ಪಡೆದು ಅಕ್ರಮ ಗಾಂಜಾ ಬೆಳೆಯುತ್ತಿದ್ದ ಮಲ್ಲಪ್ಪ ಹಿರೇಕೊಡಿ ಹಾಗೂ ಯಲ್ಲಪ್ಪ ರಬಕವಿ ಎಂಬುವವರನ್ನು ಬಂಧಿಸಿದ್ದಾರೆ.
ಈ ಕುರಿತು ರಾಯಭಾಗ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.