ಇತ್ತೀಚಿನ ಸುದ್ದಿ
ನೋವಿನಲ್ಲಿರುವ ಕಾರ್ಯಕರ್ತರ ಕೆರಳಿಸಬೇಡಿ, ಅವರ ಭಾವನೆಗಳಿಗೆ ಸ್ಪಂದಿಸಿ: ರಾಜ್ಯ ಬಿಜೆಪಿಗೆ ದೆಹಲಿ ಹೈಕಮಾಂಡ್ ಎಚ್ಚರಿಕೆ
02/08/2022, 23:47
ಹೊಸದಿಲ್ಲಿ(reporterkarnataka.com):ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಮೇಲೆ ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದು, ಈ ಮಧ್ಯೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಸಂಸದ ಸಿದ್ದೇಶ್ವರ ವಿವಾದಾತ್ಮಕ ಹೇಳಿಕೆಗಳು ನೀಡಿರುವುದು ಸರಕಾರಕ್ಕೆ ಮತ್ತು ಪಕ್ಷಕ್ಕೆ ಮತ್ತಷ್ಟು ಪೆಟ್ಟು ನೀಡಲಿದೆ ಎಂದು ಬಿಜೆಪಿ ಹೈಕಮಾಂಡ್ ರಾಜ್ಯಕ್ಕೆ ಎಚ್ಚರಿಕೆ ನೀಡಿದೆ.
ಈಶ್ವರಪ್ಪ ಮತ್ತು ಸಿದ್ದೇಶ್ವರ ಅವರ ಹೇಳಿಕೆಗೆ ಕಾರ್ಯಕರ್ತರ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿ , ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ, ಅವರ ವಿರುದ್ಧ ಮಾತಾಡಬೇಡಿ, ಸರಣಿ ಸಾವಿನಿಂದಾಗಿ ಕಾರ್ಯಕರ್ತರು ಅಭದ್ರತೆಯ ಮನಸ್ಥಿತಿಯಲ್ಲಿದ್ದಾರೆ ಅವರನ್ನು ಕೆರಳಿಸಬೇಡಿ ಎಂದು ರಾಜ್ಯ ಬಿಜೆಪಿಗೆ ದೆಹಲಿಯಿಂದಲೇ ವಾರ್ನ್ ಮಾಡಿದೆ ಎನ್ನಲಾಗುತ್ತಿದೆ.
ಇದೀಗ ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ವಿರುದ್ಧವೇ ಸಿಟ್ಟು ಹೊರಹಾಕುತ್ತಿರುವ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಅಗಸ್ಟ್ 3 ಮತ್ತು 4ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು. ಅವರು ಸರಕಾರಿ ಕಾರ್ಯಕ್ರಮಕ್ಕಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.