ಇತ್ತೀಚಿನ ಸುದ್ದಿ
ಮಂಗಳೂರು: ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ರೈಲು ಡಿಕ್ಕಿ ಹೊಡೆದು ಸಾವು
31/07/2022, 15:19

ಮಂಗಳೂರು(reporterkarnataka.com): ನಗರದ ಎಕ್ಕೂರು ಬಳಿ ಇಂದು ಬೆಳಗ್ಗೆ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ರೈಲು ಡಿಕ್ಕಿ ಹೊಡೆದು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಎಕ್ಕೂರಿನಲ್ಲಿ ಹಾದು ಹೋಗಿರುವ ರೈಲ್ವೇ ಹಳಿಯಲ್ಲಿ ಇಂದು ಬೆಳಗ್ಗೆ 10.45ರ ವೇಳೆಗೆ ಮುಂಬೈಗೆ ಸಂಚರಿಸುತ್ತಿದ್ದ ಮತ್ಸಗಂಧ ಎಕ್ಸ್‌ಪ್ರೆಸ್ ರೈಲು ಈತನಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.
ಕಿವಿಯಲ್ಲಿ ಇಯರ್ ಫೋನ್ ಇದ್ದು, ರೈಲು ಬರುವ ಸದ್ದು ಕೇಳದೆ ಅಪಘಾತವಾಗಿರುವ ನಡೆದಿರುವ ಘಟನೆ ಶಂಕೆ ವ್ಯಕ್ತವಾಗಿದೆ. ರೈಲ್ವೇ ಪೊಲೀಸರಿಂದ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ ಕೊರಳಿನಲ್ಲಿ ಕ್ರೈಸ್ತರ ಜಪಮಾಲೆ ಕಂಡು ಬಂದಿದೆ. ವ್ಯಕ್ತಿಯ ಗುರು ಪತ್ತೆಯಾಗಿಲ್ಲ.