ಇತ್ತೀಚಿನ ಸುದ್ದಿ
ಉಡುಪಿ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು: ಪುರೋಹಿತನ ಮೇಲೆ ಶಂಕೆ; ದೂರು ದಾಖಲು
30/07/2022, 10:55
ಉಡುಪಿ(reporterkarnataka.com):
ಉಡುಪಿ ಶ್ರೀಕೃಷ್ಣ ಮಠದ ಬಳಿಯ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವಾಗಿರುವ ಘಟನೆ ನಡೆದಿದೆ.
ಜು.26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ 6 ಜನ ಮಠದ ವಿದ್ಯಾರ್ಥಿಗಳು ಮತ್ತು ಪುರೋಹಿತ ಲಕ್ಷ್ಮಿ ಪ್ರಸಾದ್ ಅವರು ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದು ಇಡುವಾಗ 7 ಲಕ್ಷ ರೂಪಾಯಿ ಮೌಲ್ಯದ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಈ ಚಿನ್ನದ ಗಿಂಡಿಯನ್ನು ಪುರೋಹಿತ ಲಕ್ಷ್ಮಿ ಪ್ರಸಾದ್ ಅವರು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಅನುಮಾನ ಇರುವುದಾಗಿ ಪುತ್ತಿಗೆ ಮಠದಲ್ಲಿ ವ್ಯವಸ್ಥಾಪಕರಾಗಿರುವ ವಿಷ್ಣುಮೂರ್ತಿ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.