ಇತ್ತೀಚಿನ ಸುದ್ದಿ
ಪ್ರವೀಣ್ ಹತ್ಯೆ ಹಿನ್ನೆಲೆ: ಸುಳ್ಯ ಸ್ವಯಂಪ್ರೇರಿತ ಬಂದ್ ; ಖಾಸಗಿ ಬಸ್, ಆಟೋ ಸಂಚಾರ ಸ್ಥಗಿತ
27/07/2022, 12:50
ಸುಳ್ಯ(reporterkarnataka.com): ಬಿಜೆಪಿ ಮುಖಂಡ ಪ್ರವೀಣ್ ಹತ್ಯೆ ಹಿನ್ನೆಲೆ ಸುಳ್ಯದಲ್ಲಿ
ಬಹುತೇಕ ಅಂಗಡಿ- ಮುಂಗಟ್ಟು ಮುಚ್ಚಿವೆ.
ಸಂಘಪರಿವಾರ ಕಾರ್ಯಕರ್ತರಿಂದ ಅಂಗಡಿಗಳ ಮುಂಗಟ್ಟು ಬಂದ್ ಮಾಡಲು ಕರೆ ನೀಡಿದ್ದಾರೆ.
ಸುಳ್ಯ ಹಳೆ ಗೇಟಿನಿಂದ ರಥ ಬೀದಿವರೆಗೆ ಎಲ್ಲಾ ಅಂಗಡಿಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದು, ರಥ ಬೀದಿಯಿಂದ ಗಾಂಧಿನಗರದ ಕೆಲವು ಅಂಗಡಿಗಳು ಕಾರ್ಯಚರಿಸುತ್ತಿದೆ. ಖಾಸಗಿ ಬಸ್ಸು ನಿಲ್ದಾಣದಲ್ಲಿ ಬಸ್ಸುಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಆಟೋ ಚಾಲಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದು, ಸುಮಾರು 50ಕ್ಕೂ ಹೆಚ್ಚು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸುಳ್ಯ ಮುಖ್ಯ ರಸ್ತೆಯಲ್ಲಿ ಚಲಿಸುತ್ತಾ ಬಂದಿಗೆ ಕರೆ ನೀಡುತ್ತಿದ್ದಾರೆ.ಮೆಡಿಕಲ್ ಅಂಗಡಿಗಳು, ಹಾಲಿನ ಅಂಗಡಿಗಳು ಎಂದಿನಂತೆ ಕಾರ್ಯಚರಿಸುತ್ತಿದೆ.
ಶಾಲಾ ವಿದ್ಯಾರ್ಥಿಗಳು ಅವರವರ ಮನೆಗೆ ತೆರಳುತ್ತಿದ್ದು ಸುಳ್ಯದ ಕೆಲವು ಶಾಲೆಗಳು ಈಗಾಗಲೇ ರಜೆ ಘೋಷಿಸಿದೆ ಎಂದು ತಿಳಿದುಬಂದಿದೆ. ಸುಳ್ಯ ಜೂನಿಯರ್ ಕಾಲೇಜಿಗೆ ರಜೆ ಘೋಷಿಸಲಾಗಿದೆ.ಖಾಸಗಿ ಬಸ್ ನಿಲ್ದಾಣ ಬಳಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ರಸ್ತೆಯಲ್ಲಿ ಟೈಯರ್ ಬೆಂಕಿ ಕೊಟ್ಟು ಹತ್ತು ನಿಮಿಷಗಳ ಕಾಲ ರಸ್ತೆ ಸಂಚಾರ ಬಂದ್ ಮಾಡಿ ಆರೋಪಿಗಳನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸಿದರು.