ಇತ್ತೀಚಿನ ಸುದ್ದಿ
ಮಂಗಳೂರಿನ ಪಬ್ ಮೇಲೆ ಸಂಘಟನೆಯ ಕಾರ್ಯಕರ್ತರ ದಾಳಿ: ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಎಚ್ಚರಿಕೆ
26/07/2022, 08:57

ಮಂಗಳೂರು(reporterkarnataka.com): ನಗರದ ಬಲ್ಮಠದ ಪಬ್ ಮೇಲೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ದಾಳಿ ನಡೆಸಿದ್ದು, ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಹೊರಗೆ ಕಳಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ ನಡೆಯುತ್ತಿತ್ತು ಕುಡಿದು ಯುವಕ-ಯುವತಿಯರಿಂದ ಮೋಜು ಮಸ್ತಿ ಆರೋಪಿಸಿ ಸಂಘಟನೆಯ ಕಾರ್ಯಕರ್ತರಿ ತಡೆ ಯೊಡ್ಡಿದ್ದಾರೆ. ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್‌ನಲ್ಲಿ ಪಾರ್ಟಿ ನಡೆಯುತ್ತಿತ್ತು.
ಕೆಲವು ವರ್ಷಗಳ ಹಿಂದೆ ಇಲ್ಲಿನ ಪಬ್ ವೊಂದರ ಮೇಲೆ ದಾಳಿ ನಡೆದಿತ್ತು.