ಇತ್ತೀಚಿನ ಸುದ್ದಿ
ನಟ ಅರವಿಂದ್ ಬೋಳಾರ್ ನಟನಾ ಕೌಶಲ್ಯಕ್ಕೆ ಜಿಲ್ಲಾಧಿಕಾರಿ ಫಿದಾ: ಆ್ಯಕ್ಟಿಂಗ್ ಸ್ಟೈಲ್, ಡೈಲಾಗ್ ಡೆಲಿವರಿಗೆ ಮೆಚ್ಚುಗೆ!
25/07/2022, 21:07

ಮಂಗಳೂರು(reporterkarnataka.com):-ಖ್ಯಾತ ರಂಗಭೂಮಿ ಕಲಾವಿದ, ತುಳು ಚಲನಚಿತ್ರ ನಟ ಅರವಿಂದ್ ಬೋಳಾರ್ ಅವರ ನಟನಾ ಕೌಶಲ್ಯಕ್ಕೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಮವಾರ ಜಿಲ್ಲಾಧಿಕಾರಿಯವರ ಕಚೇರಿಗೆ ಬಂದ ಕಲಾವಿದ ಅರವಿಂದ ಬೋಳಾರ್ ಅವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಬೋಳಾರ್ ಅವರ ನಟನಾ ಶೈಲಿ, ಡೈಲಾಗ್ ಡೆಲಿವರಿ ಹಾಗೂ ಅವರ ವೃತ್ತಿಯನ್ನು ಪ್ರಶಂಶಿಸಿದರು.
ಕನ್ನಡ ಮತ್ತು ಸಂಸ್ಕಂತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಇದ್ದರು.
ತುಳು ರಂಗಭೂಮಿ ಹಾಗೂ ಕೋಸ್ಟಲ್ ವುಡ್ ನಲ್ಲಿ ಅರವಿಂದ ಬೋಳಾರ್ ಅವರದ್ದು ಬಹಳ ದೊಡ್ಡ ಹೆಸರು. ಅವರ ಕಾಮಿಡಿ ಪಾತ್ರ ಎಲ್ಲ ವರ್ಗದ ಮೆಚ್ಚುಗೆಗೆ ಪಾತ್ರವಾಗಿದೆ. ಡೈಲಾಗ್ ಡೆಲಿವರಿ ಮಾಡುವ ಅವರ ಸ್ಟೈಲೇ ಬಹಳ ಡಿಫರೆಂಟ್.