ಇತ್ತೀಚಿನ ಸುದ್ದಿ
ಖೋ ಖೋ ಪಂದ್ಯಾಟ: ನಾಣ್ಯಾಪುರ ಶಾಲೆಗೆ ವಲಯ ಮಟ್ಟದ ಫೈನಲ್ ನಲ್ಲಿ ಜಯ; ಶಾಲಾ ಇತಿಹಾಸದಲ್ಲೇ ಮೊದಲ ದಾಖಲೆ
25/07/2022, 18:41
ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಣ್ಯಾಪುರ ಗ್ರಾಮದ ಸರ್ಕಾರಿ ಶಾಲಾಮಕ್ಕಳು 2022ನೇ ಸಾಲಿನ ವಲಯ ಮಟ್ಟದ ಖೋ ಖೋ ಕ್ರೀಡೆಯಲ್ಲಿ ವಿಜಯ ಸಾಧಿಸುವ ಮೂಲಕ. ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿರುವ ಮಕ್ಕಳ ಕುರಿತು ಶಿಕ್ಷಕರು, ಗ್ರಾಮಸ್ಥರು ಹಾಗೂ ಮಕ್ಕಳ ಪೋಷಕರು ತುಂಬಾ ಹೆಮ್ಮೆಪಡುತ್ತಿದ್ದಾರೆ.
ಕಾರಣ ಈವರೆಗೂ ಶಾಲೆಯ ಮಕ್ಕಳು ಯಾವುದೇ ಕ್ರೀಡೆಯಲ್ಲಿ, ತಾಲೂಕು ಮಟ್ಟದ ಹಂತಕ್ಕೆ ತಲುಪಿರಲಿಲ್ಲ. ಆದರೆ ಇದೀಗ ತಲುಪಿದ್ದಾರೆ. ಇತ್ತೀಚೆಗೆ ಜರುಗಿದ ಹನಸಿ ದಶಮಾಪುರ ವಲಯ ಮಟ್ಟದ ಖೋ ಖೋ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಅಂತಿಮ ಹಂತದಲ್ಲಿ ವಿಜಯ ಸಾಧಿಸುವ ಮೂಲಕ ತಾಲೂಕು ಮಟ್ಟದ ಕ್ರೀಡೆಗೆ ತಂಡ ಆಯ್ಕೆಯಾಗಿದೆ.ಇದಕ್ಕಾಗಿ ಶಾಲಾ ಶಿಕ್ಷಕರು, ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಮತ್ತು ಪೋಷಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ. ಹಗರಿಬೊಮ್ಮನಹಳ್ಳಿ ತಾಲೂಕು ಮಟ್ಟದ ಖೋ ಖೋ ಕ್ರೀಡೆಯಲ್ಲಿ, ತಮ್ಮ ಗ್ರಾಮದ ಶಾಲಾ ಮಕ್ಕಳು ಅತ್ತ್ಯುತ್ತಮ ಪ್ರದರ್ಶನ ವಿಜಯ ಸಾಧಿಸಲಿದ್ದಾರೆಂದು ಶಾಲೆಯ ಅತಿಥಿ ಶಿಕ್ಷಕ ಮಂಜುನಾಥರವರು ಭರವಸೆ ವ್ಯೆಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು, ಶಾಲಾ ಶಿಕ್ಷಕರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.