ಇತ್ತೀಚಿನ ಸುದ್ದಿ
ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ: ನಟಿ ಆರಾಧನಾ ಭಟ್ ಸಹಿತ 100 ಮಂದಿ ವಿದ್ಯಾರ್ಥಿಗಳಿಗೆ ಸನ್ಮಾನ
25/07/2022, 11:45

ಮಂಗಳೂರು(reporterkarnataka.com): ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಮಂಗಳೂರು, ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಮತ್ತು ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆ ಇವರ ಸಹಯೋಗದಲ್ಲಿ 9ನೇ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನ ಅಂಗವಾಗಿ ವಿದ್ಯಾರ್ಥಿ ಸನ್ಮಾನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಭಾಭವನದಲ್ಲಿ ಭಾನುವಾರ ನಡೆಯಿತು.
ಈ ಸಂದರ್ಭದಲ್ಲಿ ಒಟ್ಟು 100 ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ ನಡೆಯಿತು. ಮಜಾಭಾರತ ಕಲಾವಿದೆ, ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಆರಾಧನಾ ಭಟ್ ಅವರು ಕೂಡ ಸನ್ಮಾನದಲ್ಲಿ ಒಬ್ಬರಾಗಿದ್ದರು. ಮಜಾಭಾರತ ಖ್ಯಾತಿಯ ಆರಾಧನಾ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು ಇವರ ಆತ್ಮೀಯ ಬಳಗದಲ್ಲಿ ಸಂತಸವನ್ನ ತಂದಿದೆ. ಈ ಸಂದರ್ಭದಲ್ಲಿ ಡಾ. ರಾಜೇಶ್ ಭಟ್ ಮಂದಾರ, ಲಾವಣ್ಯ ಭಟ್, ಸಮಾಜ ಸೇವಕಿ ಕರ್ನಾಟಕ ಕಾರ್ಮಿಕ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ಪದ್ಮಶ್ರೀ ಭಟ್ ನಿಡೋಡಿ, ಬಸವರಾಜ್ ಮಂತ್ರಿ, ದೇವಿಪ್ರಸಾದ್ ಆರಾಧನಾ ಪರವಾಗಿ ಉಪಸ್ಥಿತರಿದ್ದರು.