2:49 PM Sunday19 - January 2025
ಬ್ರೇಕಿಂಗ್ ನ್ಯೂಸ್
ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರ ಸಮ್ಮತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೋತಿಗೆ ಗ್ರಾಪಂ ಮಾಜಿ ಅಧ್ಯಕ್ಷರಿಂದ ಅಂತ್ಯ ಸಂಸ್ಕಾರ: ರಾತ್ರಿ… ಜಾತಿಗಣತಿ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆ: ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ… ಸಂಭ್ರಮ- ಸಡಗರಕ್ಕೆ ಸಾಕ್ಷಿಯಾದ ಕಡಲನಗರಿಯ ಮಂಗಳಾ ಕ್ರೀಡಾಂಗಣ: 4500 ಕ್ರೀಡಾಪಟುಗಳ ಪಾದಸ್ಪರ್ಶ ಎಷ್ಟಾದರೂ ಹಣ-ಸವಲತ್ತು ಕೇಳಿ ಕೊಡ್ತೀನಿ, ಆದರೆ ಒಲಂಪಿಕ್ ಮೆಡಲ್ ತನ್ನಿ: ಮಂಗಳೂರಿನಲ್ಲಿ ಸಿಎಂ… ಮಂಗಳೂರು: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಪ್ರಾದೇಶಿಕ ಕಚೇರಿಗೆ ಸಿಎಂ ಸಿದ್ದರಾಮಯ್ಯ… ಮಂಗಳೂರಿಗೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ: ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಶಿಲಾನ್ಯಾಸ ಕುರ್ಚಿಗಾಗಿ ಕಾದಾಟದಲ್ಲೇ ಎಲ್ಲರೂ ಮಗ್ನ, ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆ: ಪ್ರತಿಪಕ್ಷ… ಕೆಎಎಸ್‌ ಪೂರ್ವಭಾವಿ ಮರುಪರೀಕ್ಷೆಯ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್… ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ 6 ಬಾರಿ ಚಾಕು ಇರಿತ: ಮುಂಜಾನೆ…

ಇತ್ತೀಚಿನ ಸುದ್ದಿ

ಬಹು ಬೇಡಿಕೆಯ ತಾರೆ ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಗುಡ್ ಬೈ? ರಾಜಕೀಯ ಎಂಟ್ರಿ ಕೊಡುತ್ತಾರಾ ಕೊಡಗಿನ ಬೆಡಗಿ?

24/07/2022, 19:35

ಬೆಂಗಳೂರು(reporterkarnataka.com): ದಕ್ಷಿಣ ಭಾರತದಲ್ಲಿ ಭಾರೀ ಬೇಡಿಕೆಯಲ್ಲಿರು ನಟಿ ರಶ್ಮಿಕಾ ಮಂದಣ್ಣ ಅವರು ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರಾ? ಅಂತಹದ್ದೊಂದು ಗುಸು ಗುಸು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗಾದರೆ ಸಿನಿಮಾ ಬಿಟ್ಟು ಮಂದಣ್ಣ ಏನು ಮಾಡುತ್ತಾರೆ ಎಂಬ ಜಿಜ್ಞಾಸೆ ಆರಂಭವಾಗಿದೆ.

ಸದ್ಯ ಸ್ಟಾರ್ ನಟಿಯಾಗಿ ಮರೆಯುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಸಾಲು ಸಾಲು ಬ್ಯುಸಿಯಾಗಿದ್ದಾರೆ. ಈ ನಡುವೆ ಮತ್ತೊಂದು ಹೊಸ ವಿಚಾರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ರಶ್ಮಿಕಾ ಮಂದಣ್ಣ ಚಿತ್ರರಂಗಕ್ಕೆ ಬೈ ಹೇಳಿ, ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕನ್ನಡದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ಈಗ ಬಾಲಿವುಡ್ ಮತ್ತು ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿ ನೇಮು ಫೇಮು ಗಿಟ್ಟಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾದ ಬಳಿಕ ಮತ್ತಷ್ಟು ಡಿಮ್ಯಾಂಡ್ ಗಿಟ್ಟಿಸಿಕೊಂಡ ರಶ್ಮಿಕಾ, ರಾಜಕೀಯ ಅಖಾಡಕ್ಕೆ ಧುಮುಖಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಹೀಗಂತ ರಶ್ಮಿಕಾ ಹೇಳಿದ್ದಲ್ಲಾ. ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಶ್ಮಿಕಾ ಬಗ್ಗೆ ಭವಿಷ್ಯ ನುಡಿದಿರುವ ವೇಣು ಸ್ವಾಮಿ, ಕಾಂಗ್ರೆಸ್ ಪಕ್ಷ ಸೇರಲಿರುವ ರಶ್ಮಿಕಾ ಕರ್ನಾಟಕದಿಂದ ಸಂಸದೆಯಾಗಿ ರಾಜಕೀಯ ಅಖಾಡಕ್ಕೆ ಇಳಿಯಲಿದ್ದಾರೆ ಎಂದಿದ್ದಾರೆ. ರಶ್ಮಿಕಾ ಬಗ್ಗೆ ತೆಲುಗಿನ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಮಾಡಿರುವ ಮಾತುಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ವೇಣು ಸ್ವಾಮಿ ರಶ್ಮಿಕಾ ಶೀಘ್ರದಲ್ಲೇ ರಾಜಕೀಯಕ್ಕೆ ಬರಲಿದ್ದಾರೆ ಎಂದು ಹೇಳಿದ್ದಾರೆ.

ವೇಣು ಸ್ವಾಮಿ ಸೆಲೆಬ್ರಿಟಿಗಳ ಜಾತಕವನ್ನು ನೋಡಿ ಹೇಳುವುದರಲ್ಲಿ ಎತ್ತಿದ ಕೈ. ಈಗ ರಶ್ಮಿಕಾ ಕುರಿತು ಹೇಳಿರುವ ಈ ಭವಿಷ್ಯ ನಿಜವಾಗುತ್ತಾ ಅಂತ ಕಾದು ನೋಡಬೇಕಿದೆ. ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಖ್ಯಾತಿಗಳಿಸಿರುವ ರಶ್ಮಿಕಾ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.

ಅಂದಹಾಗೆ ರಶ್ಮಿಕಾ ಹೈದರಾಬಾದ್ ಮನೆಯ ಪೂಜೆಯನ್ನು ಇದೇ ಜ್ಯೋತಿಷಿ ವೇಣು ಸ್ವಾಮಿ ಮಾಡಿದ್ದರು. ಅಲ್ಲದೆ ರಕ್ಷಿತ್ ಜೊತೆ ದೂರ ಆಗಲು ಕಾರಣ ಸಹ ಇದೇ ವೇಣು ಸ್ವಾಮಿ. ರಕ್ಷಿತ್ ಜೊತೆ ಜಾತಕ ಹೊಂದಾಣಿಕೆಯಾಗದ ಕಾರಣ ಬ್ರೇಕಪ್ ಮಾಡಿಕೊಳ್ಳುವುದು ಒಳ್ಳೆಯದೆಂದು ಸಲಹೆ ನೀಡಿದ್ದೆ. ಹಾಗಾಗಿ ದೂರ ಆಗುವ ನಿರ್ಧಾರ ಮಾಡಿದರು ಎಂದು ವೇಣು ಸ್ವಾಮಿ ಹೇಳಿದ್ದಾರೆ.

ಈ ಹಿಂದೆ ಜ್ಯೋತಿಷಿ ವೇಣು ಗೋಪಾಲ್ ಸಮಂತಾ ಮತ್ತು ನಾಗಚೈತನ್ಯ ಬೇರೆ ಬೇರೆ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದರಂತೆ. ಈಗ ಹಾಗೆ ಆಗಿದೆ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು